ಫಾರೂಕ್ ಅಬ್ದುಲ್ಲಾರ ಬಂಧನ ಅವಧಿ ಮೂರು ತಿಂಗಳು ವಿಸ್ತರಣೆ

Update: 2019-12-14 13:26 GMT

ಶ್ರೀನಗರ,ಡಿ.14: ಜಮ್ಮು-ಕಾಶ್ಮೀರ ರಾಜ್ಯದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾರ ಬಂಧನವನ್ನು ಶನಿವಾರ ಇನ್ನೂ ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ ಮತ್ತು ಅವರು ಉಪ ಕಾರಾಗೃಹ ಎಂದು ಘೋಷಿಸಲಾಗಿರುವ ತನ್ನ ನಿವಾಸದಲ್ಲಿಯೇ ಸ್ಥಾನಬದ್ಧತೆಯಲ್ಲಿ ಮುಂದುವರಿಯಲಿದ್ದಾರೆ.

ಐದು ಬಾರಿ ಸಂಸದರಾಗಿರುವ ಅಬ್ದುಲ್ಲಾರನ್ನು ಆ.5ರಂದು ಕೇಂದ್ರ ಸರಕಾರವು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡಾಗಿನಿಂದ ಬಂಧನದಲ್ಲಿರಿಸಲಾಗಿದೆ.

ನ್ಯಾಷನಲ್ ಕಾನ್ಫರೆನ್ಸ್ ನಾಯಕ ಅಬ್ದುಲ್ಲಾರನ್ನು ಅಕ್ರಮವಾಗಿ ಬಂಧನದಲ್ಲಿರಿಸಲಾಗಿದೆ ಎಂದು ಆರೋಪಿಸಿ ತಮಿಳುನಾಡಿನ ಎಂಡಿಎಂಕೆ ನಾಯಕ ವೈಕೋ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುವ ಗಂಟೆಗಳ ಮುನ್ನ ಸೆ.17ರಂದು ಅವರ ವಿರುದ್ಧ ಸಾರ್ವಜನಿಕ ಸುರಕ್ಷಾ ಕಾಯ್ದೆಯನ್ನು ಹೇರಲಾಗಿತ್ತು. ಈ ಕಾಯ್ದೆಯಡಿ ಯಾವುದೇ ವ್ಯಕ್ತಿಯನ್ನು ವಿಚಾರಣೆಯಿಲ್ಲದೆ ಮೂರರಿಂದ ಆರು ತಿಂಗಳ ಕಾಲ ಜೈಲಿನಲ್ಲಿರಿಸ ಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News