ಹನೂರು: ಡಿ.21ರಂದು ಪಟ್ಟಣ ವ್ಯಾಪಾರ ಸಮಿತಿಗೆ ಚುನಾವಣೆ

Update: 2019-12-15 18:49 GMT

ಹನೂರು, ಡಿ.15: ಹನೂರು ಪಟ್ಟಣ ಪಂಚಾಯತ್ ನ ಪಟ್ಟಣ ವ್ಯಾಪಾರ ಸಮಿತಿಗೆ (ಬೀದಿ ಬದಿ ವ್ಯಾಪಾರಿಗಳ ಪ್ರತಿನಿಧಿ) ಚುನಾವಣೆ ನಡೆಯಲಿದ್ದು, ಬಹುತೇಕ ಎಲ್ಲಾ ಸ್ಥಾನಗಳು ಕೂಡ ಅವಿರೋಧವಾಗಿ ಆಯ್ಕೆಯಾದರೆ ಸಾಮಾನ್ಯ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯುವುದು ಖಚಿತವಾಗಿದೆ.

ಪಟ್ಟಣ ವ್ಯಾಪಾರ ಸಮಿತಿ ಸದಸ್ಯರಾಗಿ ಒಟ್ಟು 10 ಮಂದಿಯನ್ನು ಆಯ್ಕೆ ಮಾಡಬೇಕಾಗಿದ್ದು, ಇದರಲ್ಲಿ ಮೂರು ಮಹಿಳಾ ಮೀಸಲು ಸ್ಥಾನಕ್ಕೆ ಕೋಕಿಲ , ಮಹಾದೇವಮ್ಮ, ಭಾಗ್ಯ ಅವಿರೋಧವಾಗಿ ಆಯ್ಕೆಯಾದರೆ ಉಳಿದಂತೆ ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಮಹಾದೇವಸ್ವಾಮಿ, ಹಿಂದುಳಿದ ವರ್ಗ ಮೀಸಲು ಸ್ಥಾನಕ್ಕೆ ಎಸ್ ರಾಜಣ್ಣ, ಅಲ್ಪಸಂಖ್ಯಾತರ ಸ್ಥಾನಕ್ಕೆ ಮುನವರ್ ಬಾಷ, ವಿಕಲಚೇತನರ ಮೀಸಲು ಸ್ಥಾನಕ್ಕೆ ಪ್ರದೀಪ್.ಜಿ ಗುರುಸ್ವಾಮಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಹಾಗೆಯೇ ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಯಾರೂ ಕೂಡ ನಾಮಪತ್ರ ಸಲ್ಲಿಸದೇ ಇರುವುದರಿಂದ ಈ ಸ್ಥಾನ ಖಾಲಿ ಉಳಿದಿದೆ.

ಉಳಿದಂತೆ ಸಾಮಾನ್ಯ ಕ್ಷೇತ್ರಕ್ಕೆ ನಟೇಶ್, ಬಸವಣ್ಣ, ಆನಂದ್.ಬಿ, ಮಹಾದೇಶ್, ರಾಜು ಎಂಬುವವರು ನಾಮಪತ್ರ ಸಲ್ಲಿಸಿದ್ದು, ಈಗಾಗಲೇ ನಟೇಶ್, ಬಸವಣ್ಣ ನಾಮಪತ್ರ ವಾಪಸ್ಸು ಪಡೆದಿದ್ದಾರೆ.

ಅಂತಿಮವಾಗಿ ಸಾಮಾನ್ಯ ಕ್ಷೇತ್ರಕ್ಕೆ ಆಯ್ಕೆಯಾಗಬೇಕಿದ್ದ ಎರಡು ಸದಸ್ಯರ ಸ್ಥಾನಕ್ಕೆ ಆನಂದ್.ಬಿ, ಮಹಾದೇಶ್, ರಾಜು ಎಂಬ ಮೂವರು ಚುನಾವಣೆಯ ಕಣದಲ್ಲಿದ್ದಾರೆ. ಪಟ್ಟಣ ವ್ಯಾಪಾರಿಗಳು ಒಟ್ಟು 87 ಜನರು ನೂಂದಾಣಿಯಾಗಿ ಮತ ಚಲಾವಣೆ ಮಾಡುವ ಹಕ್ಕು ಪಡೆದುಕೂಂಡಿದ್ದಾರೆ. ಡಿಸೆಂಬರ್ 21ರಂದು ಸಂಜೆ 4ಕ್ಕೆ ಮತದಾನ ಮುಕ್ತಾಯದ ಬಳಿಕ ಎಣಿಕೆ ಪ್ರಕ್ರಿಯೆ ಜರುಗಿಲಿದೆ ಎಂದು ಸಹಕಾರ ಇಲಾಖೆಯ ಅಧೀಕ್ಷಕ ಎಸ್.ಗಿರೀಶ್ ತಿಳಿಸಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News