11ನೇ ಪ್ರಶಸ್ತಿ ಜಯಿಸಿದ ಮೊಮೊಟಾ

Update: 2019-12-16 04:51 GMT

ಶಾಂಘೈ, ಡಿ.15: ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್ಸ್ ಟೂರ್ನಿಯ ಫೈನಲ್‌ನಲ್ಲಿ ಮೊದಲ ಗೇಮ್ ಸೋಲಿನಿಂದ ಬೇಗನೆ ಚೇತರಿಸಿಕೊಂಡ ವಿಶ್ವದ ನಂ.1 ಬ್ಯಾಡ್ಮಿಂಟನ್ ಆಟಗಾರ ಕೆಂಟೊ ಮೊಮೊಟಾ ಈ ವರ್ಷ 11ನೇ ಪ್ರಶಸ್ತಿ ಜಯಿಸಿ ಗಮನಾರ್ಹ ಸಾಧನೆ ಮಾಡಿದರು.

 ಜಪಾನ್ ಆಟಗಾರ ಮೊಮೊಟೊ ಚೀನಾದ ದಕ್ಷಿಣ ನಗರ ಗ್ವಾಂಗ್‌ಝೌನಲ್ಲಿ ರವಿವಾರ ಫೈನಲ್ ಪಂದ್ಯ ಆಡುವ ಮೊದಲು ಈ ವರ್ಷ ಒಟ್ಟು 10 ಪ್ರಶಸ್ತಿಗಳನ್ನು ಜಯಿಸಿದ್ದರೆ, ಎದುರಾಳಿ ಅಂಥೋನಿ ಸಿನಿಸುಕಾ ಜಿಂಟಿಂಗ್ ಒಂದೂ ಪ್ರಶಸ್ತಿಯನ್ನು ಜಯಿಸಿರಲಿಲ್ಲ. 8ನೇ ಶ್ರೇಯಾಂಕದ ಇಂಡೋನೇಶ್ಯ ಆಟಗಾರ ಅಂಥೋನಿ ‘ಹಾಟ್ ಫೇವರಿಟ್’ ಮೊಮೊಟಾರನ್ನು ಮೊದಲ ಗೇಮ್‌ನಲ್ಲಿ 21-17 ಅಂತರದಿಂದ ಮಣಿಸಿ ಶಾಕ್ ನೀಡಿದರು.

87 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಫೈನಲ್ ಫೈಟ್‌ನಲ್ಲಿ ಉಳಿದೆರಡು ಗೇಮ್‌ಗಳನ್ನು 21-17, 21-14 ಅಂತರದಿಂದ ವಶಪಡಿಸಿಕೊಂಡ ಮೊಮೊಟಾ ಪ್ರಶಸ್ತಿ ಮೇಲೆ ಹಕ್ಕು ಚಲಾಯಿಸಿದರು. 23ರ ಹರೆಯದ ಜಿಂಟಿಂಗ್ ಈ ವರ್ಷ ಐದು ಟೂರ್ನಿಗಳಲ್ಲಿ ಫೈನಲ್ ತಲುಪಿದ್ದರೂ ಅವರಿಗೆ ಪ್ರಶಸ್ತಿ ಮರೀಚಿಕೆಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News