ಜಾಮಿಯಾ ವಿವಿ: ಅಂಗಿ ಬಿಚ್ಚಿ ಮಾನವ ಸರಪಳಿ ರಚಿಸಿ ವಿದ್ಯಾರ್ಥಿಗಳ ಪ್ರತಿಭಟನೆ

Update: 2019-12-19 08:41 GMT

ಹೊಸದಿಲ್ಲಿ, ಡಿ.16: ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳು  ಸೋಮವಾರ ವಿಶ್ವವಿದ್ಯಾಲಯದ ಗೇಟ್‌ಗಳ ಹೊರಗೆ ಕೊರೆಯುವ ಚಳಿಯಲ್ಲೂ  ಅಂಗಿ ಬಿಚ್ಚಿ  ಮಾನವ ಸರಪಳಿಯನ್ನು ರಚಿಸಿ ತಮ್ಮ ಸಹೋದ್ಯೋಗಿಗಳ ವಿರುದ್ಧ ಪೊಲೀಸ್ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

ಕ್ಯಾಂಪಸ್ ಒಳಗೆ ನಡೆದ ಹಿಂಸಾಚಾರದ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ

"ಪೋಲಿಸ್ ದೌರ್ಜನ್ಯ" ದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿ ವಿದ್ಯಾರ್ಥಿಗಳ ಗುಂಪೊಂದು  ತಮ್ಮ ಸಹೋದ್ಯೋಗಿಗಳೊಂದಿಗೆ ಸಣ್ಣ ಮೆರವಣಿಗೆಯನ್ನು ಕೈಗೊಂಡು "ಇಂಕ್ವಿಲಾಬ್ ಜಿಂದಾಬಾದ್" ಘೋಷಣೆಗಳನ್ನು ಕೂಗಿದರು.

ಧ್ವಜವನ್ನು ಹಿಡಿದಿದ್ದ  ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ಮತ್ತು ದಿಲ್ಲಿ  ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. "ಈ ಸರ್ಕಾರ ಅಲ್ಪಸಂಖ್ಯಾತ ವಿರೋಧಿ, ವಿದ್ಯಾರ್ಥಿ ವಿರೋಧಿ, ಬಡ ವಿರೋಧಿ. ಇದನ್ನು ನಾವು ಸಹಿಸುವುದಿಲ್ಲ. " ಎಂದು ಅವರು ಹೇಳಿದರು. 

ಕೆಲವರು ಟ್ವಿಟರ್, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರತಿಭಟನೆಯನ್ನು ನೇರ ಪ್ರಸಾರ ಮಾಡಿದ್ದಾರೆ.

ರವಿವಾರ ಪೊಲೀಸರು ವಿಶ್ವವಿದ್ಯಾಲಯದ ಆವರಣದಲ್ಲಿ ಎರಡು ಮಸೀದಿಗಳಿಗೆ ಹಾನಿ ಮಾಡಿದ್ದಾರೆ, ಇಮಾಮ್‌ನ್ನು ಥಳಿಸಿದ್ದಾರೆ ಮತ್ತು ಗ್ರಂಥಾಲಯದಲ್ಲಿದ್ದ ಅರ್ಸಲಾನ್ (27) ಎಂಬ ಅಂಧ ವಿದ್ಯಾರ್ಥಿಗೆ ಥಳಿಸಿದ್ದಾರೆ ಎಂದು ವಿದ್ಯಾರ್ಥಿಗಳ ಗುಂಪು ಹೇಳಿಕೊಂಡಿದೆ.

ಅನಸ್ ಸಿದ್ದಿಕಿ ಎಂಬ ವಿದ್ಯಾರ್ಥಿ, ಪೊಲೀಸರು ಅವರನ್ನು "ನಮ್ಮ ಸಹೋದ್ಯೋಗಿಗಳನ್ನು ಕೆಟ್ಟದಾಗಿ ಥಳಿಸಲಾಗಿದೆ. ಪೊಲೀಸರು ಸ್ನಾನಗೃಹಗಳು, ಗೃಥಾಲಯಗಳಿಗೆ ದಾಳಿ ನಡೆಸಿದ್ದಾರೆ.  ಹುಡುಗಿಯರನ್ನು ಥಳಿಸಿದ್ದಾರೆ. ನಮ್ಮ ಪ್ರತಿಭಟನೆ ದಿಲ್ಲಿ  ಪೊಲೀಸ್ ಎಂದು ಕರೆಯಲ್ಪಡುವ ಗೂಂಡಾಗಳ ವಿರುದ್ಧವಾಗಿದೆ" ಎಂದು ಗುರುತಿಸಲು ಇಷ್ಟಪಡದ ಸಂಶೋಧನಾ ವಿದ್ಯಾರ್ಥಿಯೊಬ್ಬರು ಸೋಮವಾರ ಹೇಳಿದ್ದಾರೆ.

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ವಿಶ್ವವಿದ್ಯಾಲಯದ ಉಪಕುಲಪತಿ ನಜ್ಮಾ ಅಖ್ತರ್ ಅವರು ಗಾಯಗೊಂಡ ವಿದ್ಯಾರ್ಥಿಗಳನ್ನು ಭೇಟಿಯಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News