‘ಹಿಂದು-ಮುಸ್ಲಿಂ’ ಪ್ರತ್ಯೇಕಿಸಲು ಸಿಎಎ ಜಾರಿ: ಸತೀಶ್ ಜಾರಕಿಹೊಳಿ

Update: 2019-12-22 16:39 GMT

ಬೆಂಗಳೂರು, ಡಿ.22: ಹಿಂದು ಹಾಗೂ ಮುಸ್ಲಿಮರನ್ನು ಪ್ರತ್ಯೇಕ ಮಾಡಲು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ. 

ರವಿವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಜಿಡಿಪಿ ಕುಸಿದು ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಅದನ್ನು ಮರೆಮಾಚಲು ಈ ರೀತಿಯ ಹೊಸ ನಾಟಕ ಮಾಡುತ್ತಿದ್ದಾರೆ. ಧರ್ಮಗಳ ಮಧ್ಯೆ ಸಂಘರ್ಷ ಮಾಡೋದೇ ಬಿಜೆಪಿ ಉದ್ದೇಶವಾಗಿದ್ದು, ಅದರಿಂದಲೇ ಅವರು ಅಧಿಕಾರಕ್ಕೆ ಬರುತ್ತಿದ್ದಾರೆ ಎಂದು ಹೇಳಿದರು.

ಮಂಗಳೂರಿನಲ್ಲಿ ಗೋಲಿಬಾರ್ ಮಾಡುವ ಅವಶ್ಯಕತೆ ಇರಲಿಲ್ಲ. ಗೋಲಿಬಾರ್ ಮೂಲಕ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜನ ಸರಕಾರದ ಪರವಾಗಿ ಮತ ಚಲಾಯಿಸಿದ್ದರಿಂದ ಗೋಕಾಕನಲ್ಲಿ ನಮಗೆ ಸೋಲಾಗಿದೆ. ಧರ್ಮದ ಆಧಾರದ ಮೇಲೆ ಚುನಾವಣೆ ನಡೆದಿದೆ ಎಂದರು.

ಹುಚ್ಚು ನಾಯಿಗೆ ಕಲ್ಲು ಹೊಡೆಯಿರಿ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ ಅವರು ರಮೇಶ ಜಾರಕಿಹೊಳಿ ದಿನಾ ಒಂದೊಂದು ಹೇಳುತ್ತಾನೆ. ಅದಕ್ಕೆ ನಾನು ಪ್ರತಿಕ್ರಿಯೆ ಮಾಡಲ್ಲ. ಅವನು ಬಿಎಸ್‌ವೈ ಅವರನ್ನೂ ಬ್ಲಾಕ್ ಮೇಲ್ ಮಾಡುತ್ತಾನೆ, ಆ ಗುಣ ಅವನ ರಕ್ತದಲ್ಲಿಯೆ ಇದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News