ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-12-28 07:19 GMT

ಮಾನವ ಹಕ್ಕು, ಅಂತರ್‌ರಾಷ್ಟ್ರೀಯ ಕಾನೂನು, ಮಾನವೀಯ ವ್ಯವಹಾರಗಳು ಹಾಗೂ ಸಂಬಂಧಿತ ವಿಷಯಗಳಲ್ಲಿ ಸಂಶೋಧನೆ ಮತ್ತು ಕ್ಷೇತ್ರಕಾರ್ಯ ನಡೆಸಲು ಕಾನೂನು ವಿದ್ಯಾರ್ಥಿಗಳಿಗೆ ಮತ್ತು ಯುವ ವೃತ್ತಿಪರರಿಗೆ ಅಮೆರಿಕನ್ ಸೊಸೈಟಿ ಆಫ್ ಇಂಟರ್‌ನ್ಯಾಷನಲ್ ಲಾ(ಎಎಸ್‌ಐಎಲ್) ಕಿರು ಅನುದಾನ ಒದಗಿಸುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆರ್ಥಿಕ ಮತ್ತು ಹೆಚ್ಚುವರಿ ಸೌಲಭ್ಯ ದೊರಕುತ್ತದೆ.

ಅರ್ಹತೆ:

2017ರ ಡಿಸೆಂಬರ್ ಬಳಿಕ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿರುವ(ಸ್ನಾತಕೋತ್ತರ ಅಥವಾ ಪದವಿ) ಅಥವಾ ಈಗ ಕಾನೂನು ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಅರ್ಹರು. ಹೆಲ್ಟನ್ ಫೆಲೊಶಿಪ್‌ಗೆ ಅರ್ಜಿ ಸಲ್ಲಿಸುವ ಮೊದಲು ತಮ್ಮ ಪ್ರಸ್ತಾವನೆ ಬಗ್ಗೆ ಪ್ರಾಯೋಜಕ ಸಂಸ್ಥೆಗಳನ್ನು ಸಂಪರ್ಕಿಸಿರುವವರು ಅರ್ಜಿ ಸಲ್ಲಿಸಬಹುದು.

ನೆರವು:

ಆಯ್ಕೆಯಾದ ಅಭ್ಯರ್ಥಿಗಳು 2,000 ಅಮೆರಿಕನ್ ಡಾಲರ್ ಮೊತ್ತದ ಜೊತೆಗೆ ಎಎಸ್‌ಐಎಲ್ ಸದಸ್ಯತ್ವವನ್ನೂ ಪಡೆಯುತ್ತಾರೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜನವರಿ 27, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/HEP4

-------------------------------------------------------

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

ಲ ಟ್ರೋಬೆ ಯುನಿವರ್ಸಿಟಿ ಡೆಸ್ಟಿನೇಷನ್ ಆಸ್ಟ್ರೇಲಿಯಾ ರಿಸರ್ಚ್ ಸ್ಕಾಲರ್‌ಶಿಪ್ 2020

ವಿವರ:

ಆಸ್ಟ್ರೇಲಿಯಾದಲ್ಲಿ ಉನ್ನತ ಗುಣಮಟ್ಟದ ಅಧ್ಯಯನ ಅನುಭವ ಹೊಂದಲು ದೇಶೀಯ ಅಥವಾ ವಿದೇಶಿ ವಿದ್ಯಾರ್ಥಿಗಳಿಂದ ಆಸ್ಟ್ರೇಲಿಯಾದ ಲ ಟ್ರೋಬೆ ಯುನಿವರ್ಸಿಟಿ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದವರಿಗೆ ಆರ್ಥಿಕ ಪುರಸ್ಕಾರ ದೊರಕಲಿದೆ.

ಅರ್ಹತೆ:

ಸಂಬಂಧಿತ ವಿಷಯಗಳಲ್ಲಿ 75 ಅಥವಾ ಹೆಚ್ಚಿನ ದರ್ಜೆಯೊಂದಿಗೆ ಸಂಶೋಧನಾ ಪದವಿ ಅಥವಾ ಆನರ್ಸ್ ಪದವಿ ಪಡೆದವರು, ‘ಮಾಸ್ಟರ್ಸ್ ಬೈ ಕೋರ್ಸ್‌ವರ್ಕ್, 70 ಅಥವಾ ಹೆಚ್ಚಿನ ಅಂಕದೊಂದಿಗೆ ಸಂಶೋಧನಾ ಪದವಿಯೊಂದಿಗೆ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.

ನೆರವು:

ಆಯ್ಕೆಯಾದ ಅಭ್ಯರ್ಥಿಗಳಿಗೆ 4 ವರ್ಷದವರೆಗೆ ವಾರ್ಷಿಕ 15,000 ಆಸ್ಟ್ರೇಲಿಯನ್ ಡಾಲರ್ ನೆರವು ಒದಗಿಸಲಾಗುವುದು. ಅಲ್ಲದೆ ಬೋಧನಾ ಶುಲ್ಕದಲ್ಲಿ ಕಡಿತ ಮಾಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:ಜನವರಿ 31, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

http://www.b4s.in/bharati/LTR2

-------------------------------------------------------

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

 ಚೈನೀಸ್ ಗವರ್ನ್‌ಮೆಂಟ್ ಸ್ಕಾಲರ್‌ಶಿಪ್ 2020-21

ವಿವರ:

 ಪದವಿ, ಸ್ನಾತಕೋತ್ತರ ಪದವಿ, ಜನರಲ್ ಸ್ಕಾಲರ್ ಪ್ರೋಗ್ರಾಂ, ಸೀನಿಯರ್ ಸ್ಕಾಲರ್ ಪ್ರೋಗ್ರಾಂ ಅಧ್ಯಯನ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಂದ ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿವಿಧ ಪುರಸ್ಕಾರ ದೊರಕುತ್ತದೆ.

ಅರ್ಹತೆ:

12ನೇ ತರಗತಿ, ಪದವಿ ಅಥವಾ ಸ್ನಾತಕೋತ್ತರ ಪದವಿ ತೇರ್ಗಡೆಯಾಗಿರುವ ಭಾರತದ ಖಾಯಂ ನಿವಾಸಿಗಳು ಅರ್ಜಿ ಸಲ್ಲಿಸಬಹುದು. ಗರಿಷ್ಠ 25(ಪಿಯುಸಿ), 35(ಪದವಿ), 40 (ಸ್ನಾತಕೋತ್ತರ) ವರ್ಷದವರಾಗಿರಬೇಕು.

ನೆರವು:

ಆಯ್ಕೆಯಾದ ಅಭ್ಯರ್ಥಿಗಳು ಚೀನಾ ಸರಕಾರ ಕೊಡಮಾಡುವ ಸ್ಕಾಲರ್‌ಶಿಪ್ ಪಡೆಯುತ್ತಾರೆ. ಜೊತೆಗೆ ಚೀನಾದಿಂದ ಭಾರತಕ್ಕೆ ಬಂದು ಹೋಗುವ ವಿಮಾನ ಪ್ರಯಾಣದ ವೆಚ್ಚವನ್ನೂ ಪಾವತಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜನವರಿ 24, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

http://www.b4s.in/bharati/GCS1

-------------------------------------------------------

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

 ಲೇಡಿ ಟಾಟ ಟ್ರಸ್ಟ್ ಯಂಗ್ ರಿಸರ್ಚರ್ ಅವಾರ್ಡ್ 2020

ವಿವರ:

ಬಯಾಲಜಿಕಲ್ ಸೈಯನ್ಸ್‌ನಲ್ಲಿ ಗಮನಾರ್ಹ ಸಾಧನೆ ತೋರಿರುವ, ಮಾನವರಿಗೆ ಬರುವ ಕಾಯಿಲೆಗಳಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳಿಗೆ ನವೀನ ಪರಿಹಾರ ಹುಡುಕಲು ಬದ್ಧರಾಗಿರುವ, ಉನ್ನತಮಟ್ಟದ ಸಂಶೋಧನೆ ನಡೆಸಲು ಸಾಮರ್ಥ್ಯವಿರುವ ಭಾರತದ ಯುವ ವಿಜ್ಞಾನಿಗಳಿಂದ ಮುಂಬೈಯ ಲೇಡಿ ಟಾಟ ಸ್ಮಾರಕ ಟ್ರಸ್ಟ್ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನಿಸಿದೆ.

ಅರ್ಹತೆ:

40 ವರ್ಷಕ್ಕಿಂತ ಕೆಳಹರೆಯದ ಭಾರತೀಯರು, ಯಾವುದೇ ಬಯಲಾಜಿಕಲ್ ಸೈಯನ್ಸ್ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಅಥವಾ ಮೆಡಿಕಲ್ ಸೈಯನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ, ವೃತ್ತಿಪರರಾಗಿ ಕನಿಷ್ಠ 4 ವರ್ಷದ ಅನುಭವ ಇರುವ, ಭಾರತದ ವಿವಿ/ಸಂಸ್ಥೆಗಳಲ್ಲಿ ನಿಯಮಿತ ಸ್ಥಾನ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ನೆರವು:

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 25,000 ರೂ. ಹಾಗೂ ವಾರ್ಷಿಕ 7 ಲಕ್ಷ ರೂ. ಸಾದಿಲ್ವಾರು ಅನುದಾನ ದೊರಕುತ್ತದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜನವರಿ 15, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

http://www.b4s.in/bharati/LTM1

-------------------------------------------------------

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News