‘ಶಿಕ್ಷಣ ಶಿಲ್ಪಿ’ ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2019-12-28 16:48 GMT

ಬೆಂಗಳೂರು, ಡಿ. 28: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರಕಟಿಸುತ್ತಿರುವ ‘ಶಿಕ್ಷಣ ಶಿಲ್ಪಿ’ಶೈಕ್ಷಣಿಕ ಮಾಸಪತ್ರಿಕೆಯ ವಾರ್ಷಿಕೋತ್ಸವವನ್ನು ರಾಜ್ಯಮಟ್ಟದ ಶೈಕ್ಷಣಿಕ ಸಮ್ಮಿಲನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಶಿಕ್ಷಕರಿಂದ ಶಿಕ್ಷಣ ಶಿಲ್ಪಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

2020ರ ಫೆ.1 ಮತ್ತು 2ರಂದು ವಿಜಯಪುರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಮಕ್ಕಳ ಶಿಕ್ಷಣ ಹಾಗೂ ಶಾಲಾಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿದ 10 ಶಿಕಕ್ಷ/ಶಿಕ್ಷಕಿಯರಿಗೆ ಶಿಕ್ಷಣ ಶಿಲ್ಪಿಪ್ರಶಸ್ತಿ ನೀಡಲಾಗುವುದು. ಈ ಬಗ್ಗೆ ಶಿಕ್ಷಕರು ಅಥವಾ ಅವರ ಪರವಾಗಿ ಪೋಷಕರು, ಎಸ್‌ಡಿಎಂಸಿ, ಸಂಘ-ಸಂಸ್ಥೆಗಳು ಪ್ರಸ್ತಾವನೆಯನ್ನು ಸಲ್ಲಿಸಬಹುದು.

ಕನಿಷ್ಠ 15 ವರ್ಷಗಳ ಸೇವೆ ಸಲ್ಲಿಸಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕ/ಶಿಕ್ಷಕಿಯರು ಈ ಪ್ರಶಸ್ತಿಯ ವ್ಯಾಪ್ತಿಗೆ ಬರಲಿದ್ದು, ತಮ್ಮ ಅನುಭವ, ಸಾಧನೆ, ಈಗಾಗಲೇ ಬಂದಿರುವ ಇತರ ಪ್ರಶಸ್ತಿಗಳು ಸೇರಿದಂತೆ ಎಲ್ಲ ವಿವರಗಳೊಂದಿಗೆ 2020ರ ಜನವರಿ 20ರ ಒಳಗೆ ಪ್ರಸ್ತಾವನೆ ಕಳುಹಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗೆ ಕೆ.ಬಿ.ಮಹದೇವಪ್ಪ, ಸಂಚಾಲಕರು, ಶಿಕ್ಷಣ ಶಿಲ್ಪಿಉತ್ತಮ ಶಿಕ್ಷಕ ಪ್ರಶಸ್ತಿ, ಚಲುವಕೃಪ, ನಂ.84/2, 13ನೆ ಕ್ರಾಸ್, 9ನೆ ಮುಖ್ಯರಸ್ತೆ, ವಿಲ್ಸನ್ ಗಾರ್ಡನ್, ಬೆಂಗಳೂರು-30 ಅಥವಾ ಮೊಬೈಲ್: 98453 08707 ಅನ್ನು ಸಂಪರ್ಕಿಸಲು ಪ್ರಕಟಣೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News