ಪ್ರಿಯಾಂಕಾ ವಿರುದ್ಧ ಪೊಲೀಸ್ ಬಲಪ್ರಯೋಗ ಆರೋಪ: ಪ್ರಧಾನಿಗೆ ಟ್ವೀಟ್ ಮಾಡಿ ಶತ್ರುಘ್ನ ಸಿನ್ಹಾ ಹೇಳಿದ್ದೇನು ?

Update: 2019-12-29 14:58 GMT

ಹೊಸದಿಲ್ಲಿ, ಡಿ.29: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಪೊಲೀಸರು ಎಳೆದಾಡಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ನಟ, ರಾಜಕಾರಣಿ ಶತ್ರುಘ್ನ ಸಿನ್ಹ, “ಗಾಂಧಿ-ನೆಹರೂ ಕುಟುಂಬದ ಮಗಳಿಗೇ ಹೀಗಾದರೆ, ಸಾಮಾನ್ಯರ ಪಾಡೇನು ಎಂಬುದನ್ನು ಆಲೋಚಿಸಲೂ ಭಯವಾಗುತ್ತದೆ” ಎಂದಿದ್ದಾರೆ.

“ಮೊದಲು ವಿಐಪಿಗಳ ಭದ್ರತೆಯನ್ನು ಹಿಂಪಡೆದ ಅಥವಾ ಕೆಳಮಟ್ಟಕ್ಕೆ ಇಳಿಸಿದ ನೀವು ನಿಧಾನವಾಗಿ ನಿಮ್ಮ ಭದ್ರತೆಯನ್ನು ಹೆಚ್ಚಿಸಿಕೊಂಡಿದ್ದೀರಿ. ಗಾಂಧಿ ಕುಟುಂಬದ ಎಸ್‌ಪಿಜಿ ಭದ್ರತೆಯನ್ನು ಹಿಂಪಡೆದ ಬಳಿಕ ಇದೀಗ ನಿಮ್ಮ ಸರಕಾರದ ಆದೇಶದಂತೆ ಉತ್ತರಪ್ರದೇಶದ ಪೊಲೀಸರು ಪ್ರಿಯಾಂಕಾ ಗಾಂಧಿಯವರೊಂದಿಗೆ ಅತ್ಯಂತ ನಾಚಿಕೆಗೇಡಿನ ರೀತಿಯಲ್ಲಿ ವರ್ತಿಸಿದ್ದಾರೆ. ಇದನ್ನು ಕಟುವಾಗಿ ಖಂಡಿಸಬೇಕು” ಎಂದು ಶತ್ರುಘ್ನ ಸಿನ್ಹ ಪ್ರಧಾನಿ ಮೋದಿಯನ್ನುದ್ದೇಶಿಸಿ ಟ್ವೀಟ್ ಮಾಡಿದ್ದಾರೆ.

“ಡ್ಯಾಮೇಜ್ ಕಂಟ್ರೋಲ್ ನಡೆಸುವ ವಿಧಾನ ಇದಲ್ಲ ಸರ್” ಎಂದು ವ್ಯಂಗ್ಯವಾಗಿ ಮತ್ತೊಂದು ಟ್ವೀಟ್ ಮಾಡಿರುವ ಸಿನ್ಹ, ಪೊಲೀಸರ ತಡೆಯನ್ನು ಲೆಕ್ಕಿಸದೆ ದ್ವಿಚಕ್ರ ವಾಹನದಲ್ಲಿ ಮುಂದುವರಿದ ಪ್ರಿಯಾಂಕಾ ಅವರ ಛಲಕ್ಕೆ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News