×
Ad

ಜಾರ್ಖಂಡ್ | ಬೃಹತ್ ಪ್ರಮಾಣದ ನಗದು ವಶ ಈಡಿಯಿಂದ ಸಚಿವರ ಕಾರ್ಯದರ್ಶಿ ಸಂಜೀವ್ ಲಾಲ್, ಮನೆ ಕೆಲಸದ ಆಳು ಬಂಧನ

Update: 2024-05-07 20:57 IST

ರಾಂಚಿ : ಜಾರ್ಖಂಡ್ ಸಚಿವ ಆಲಂಗಿರ್ ಆಲಂ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಗೆ ನಂಟು ಹೊಂದಿದ ನಿವಾಸದಿಂದ ದೊಡ್ಡ ಪ್ರಮಾಣದ ನಗದನ್ನು ಜಾರಿ ನಿರ್ದೇಶನಾಲಯ(ಈಡಿ) ವಶಪಡಿಸಿಕೊಂಡ ಒಂದು ದಿನದ ಬಳಿಕ ಮಂಗಳವಾರ ಬೆಳಗ್ಗೆ ಇಬ್ಬರನ್ನು ಬಂಧಿಲಾಗಿದೆ.

ಸಂಜೀವ್ ಲಾಲ್ ಹಾಗೂ ಅವರ ಮನೆ ಕೆಲಸದಾಳು ಜೆಹಾಂಗೀರ್ ಅವರನ್ನು ಬಂಧಿಸಲಾಗಿದೆ. ರಾಂಚಿಯ ಅಪಾರ್ಟ್ಮೆಂಟ್ನಲ್ಲಿರುವ ಜೆಹಾಂಗೀರ್ ಅವರ ನಿವಾಸದಲ್ಲಿ 32 ಕೋಟಿ ರೂ. ಸೋಮವಾರ ಪತ್ತೆಯಾಗಿತ್ತು.

ರಾತ್ರಿಯಿಡೀ ವಿಚಾರಣೆ ನಡೆಸಿದ ಬಳಿಕ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಇಬ್ಬರನ್ನೂ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇತರ ಕೆಲವು ಸ್ಥಳಗಳಲ್ಲಿ ಪತ್ತೆಯಾದ 3 ಕೋಟಿ ರೂ.ವನ್ನು ಹೊರತುಪಡಿಸಿ ಒಟ್ಟು 32 ಕೋಟಿ ರೂ. ನಗದನ್ನು ಜಾರಿ ನಿರ್ದೇಶನಾಲಯ(ಈಡಿ) ವಶಪಡಿಸಿಕೊಂಡಿದೆ. ಒಟ್ಟು ವಸೂಲಾತಿ 35.23 ಕೋಟಿ ರೂ.ಗಳಾಗಿವೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News