ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು: ಯುವಕ ಮೃತ್ಯು

Update: 2019-12-30 18:31 GMT

ಮಂಡ್ಯ, ಡಿ.30: ಪ್ರೇಮಿಗಳಿಬ್ಬರು ಹೊಂಡಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹಳೇ ಕಿರಂಗೂರು-ಕೆಂಗಾರಕೊಪ್ಪಲು ಬಳಿ ನಡೆದಿದೆ.

ಶ್ರೀರಂಗಪಟ್ಟಣ ತಾಲೂಕು ಪಾಲಹಳ್ಳಿಯ ಅರ್ಜುನ್(26) ಮತ್ತು ಆತನ ಪ್ರಿಯತಮೆ ಸವಿತ(ಹೆಸರು ಬದಲಿಸಲಾಗಿದೆ) ಆತ್ಮಹತ್ಯೆಗೆ ಪ್ರಯತ್ನಿಸಿದವರು. ಇವರಲ್ಲಿ ಪ್ರಿಯಕರ ಅರ್ಜುನ್ ಸಾವನ್ನಪ್ಪಿದ್ದಾನೆ.

ಅರ್ಜುನ್ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಲಿಫ್ಟ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಈತ ಮತ್ತು ಸವಿತ ಹಲವು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಆತ್ಮಹತ್ಯೆ ಯತ್ನ ಕಾರಣ ತಿಳಿದುಬಂದಿಲ್ಲ. ಸಾರ್ವಜನಿಕರಿಂದ ಪಾರಾದ ಪ್ರಿಯತಮೆಯನ್ನು ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News