ದಾವಣಗೆರೆ: ಪಿಯು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಶಿಬಿರ

Update: 2019-12-31 04:48 GMT

ದಾವಣಗೆರೆ, ಡಿ.31: ಪಿಯುಸಿ ವಿದ್ಯಾರ್ಥಿಗಳಿಗಾಗಿ ‘ಪವರ್ ಆಫ್ ಯೂತ್’ ಎಂಬ ವೃತ್ತಿ ಮಾರ್ಗದರ್ಶನ ಬಗ್ಗೆ ಶಿಬಿರವನ್ನು ಇತ್ತೀಚೆಗೆ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದಾವಣಗೆರೆ ಜಿಲ್ಲೆಯ ಪಿಯು ಶಿಕ್ಷಣದ ಉಪನಿರ್ದೇಶಕ ನಿರಂಜನ್ ಜಿ.ಸಿ., ವಿದ್ಯಾರ್ಥಿಗಳು ತಮ್ಮ ವೃತ್ತಿಯನ್ನು ಆಯ್ಕೆ ಮಾಡುವುದರಲ್ಲಿ ಪೋಷಕರು ಒತ್ತಡ ಹೇರದೇ ವಿದ್ಯಾರ್ಥಿಗಳೇ ತೀರ್ಮಾನ ಕೈಗೊಳ್ಳಲು ಅವಕಾಶ ಕಲ್ಪಿಸಬೇಕು ಎಂದರು.

ದಾವಣಗೆರೆಯ ಅಮೃತ ವಿದ್ಯಾಲಯದ ಪ್ರಾಂಶುಪಾಲೆ ಬ್ರಹ್ಮಚಾರಿಣಿ ಅಂಜಲಿ ಅವರು ವಿದ್ಯಾರ್ಥಿಗಳಿಗೆ ಹುರಿದುಂಬಿಸುವ ಕಥೆಗಳೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಗುರಿಯಿರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಧ್ಯಾನಶಿಬಿರ ಆಯೋಜಿಸಿ ವಿದ್ಯಾರ್ಥಿಗಳು ಮನಸ್ಸಲ್ಲಿ ಶಾಂತತೆ ಕಾಪಾಡುವ ಬಗ್ಗೆ ತಿಳಿಸಿದರು.

ಅಮೃತ ವಿಶ್ವ ವಿದ್ಯಾಪೀಠ ಅಮೃತಪುರಿ ಕ್ಯಾಂಪಸ್‌ನ ಕಂಪ್ಯೂಟರ್ ಸಯನ್ಸ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಬ್ರಹ್ಮಚಾರಿ ಆನಂದ ಶೆಣೈ ಮಾತನಾಡಿ ಯುವ ಜನಾಂಗಕ್ಕೆ ತಾಂತ್ರಿಕ ಆಧಾರಿತ ವಿಶ್ವದ ಕುರಿತು ಮಾರ್ಗದರ್ಶನ ನೀಡಿದರು.

ಲೈಫ್ ಕೋಚ್ ಮತ್ತು ಪ್ರೇರಣಾದಾಯಕ ಭಾಷಣಕಾರ ಕೃಷ್ಣನ್ ಕುಟ್ಟಿ ಜೀವನದಲ್ಲಿ ಪೋಷಕರ ಮಹತ್ವದ ಬಗ್ಗೆ ತಿಳಿಸಿದರು. ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸುರೇಶ್ ಕೆ.ಎಸ್. ಉಪಸ್ಥಿತರಿದ್ದರು.

ಶಿಬಿರದಲ್ಲಿ ದಾವಣಗೆರೆ ಆಸುಪಾಸಿನ ಪ್ರದೇಶದ 2000ಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳು, ಕಾಲೇಜು ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News