ಪ.ಜಾತಿ/ಪ.ಪಂಗಡ ಸಾಹಿತಿಗಳ ಚೊಚ್ಚಲ ಕೃತಿಗೆ ಪ್ರೋತ್ಸಾಹ ಧನ

Update: 2020-01-02 17:27 GMT

ಉಡುಪಿ,ಜ.2: ಕನ್ನಡ ಪುಸ್ತಕ ಪ್ರಾಧಿಕಾರವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಬರಹಗಾರರ ಕನ್ನಡದ ಚೊಚ್ಚಲ ಕೃತಿ ಪ್ರಕಟಣೆಗೆ 25,000 ರೂ.ಗಳ ಪ್ರೋತ್ಸಾಹಧನ ನೀಡುವ ಯೋಜನೆ ರೂಪಿಸಿದ್ದು, ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಜಿ ಸಲ್ಲಿಸ ಬಯಸುವ ಅರ್ಜಿದಾರರು ಕಡ್ಡಾಯವಾಗಿ ತಮ್ಮ ಆರ್.ಡಿ. ನಂಬರ್ ಇರುವ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್‌ನ ಝೆರಾಕ್ಸ್ ಪ್ರತಿ, ರೇಷನ್ ಕಾರ್ಡ್ ಹಾಗೂ ಪಾನ್‌ಕಾರ್ಡ್ ಝೆರಾಕ್ಸ್ ಪ್ರತಿ, ವಯಸ್ಸಿನ ದೃಢೀಕರಣಕ್ಕಾಗಿ ಎಸೆಸೆಲ್ಸಿ ಅಥವಾ ತತ್ಸಮಾನ ಪರೀಕ್ಷಾ ಪ್ರಮಾಣ ಪತ್ರದ ಪ್ರತಿಯನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ಎ4 ಸೈಜ್ ಹಾಳೆಯಲ್ಲಿ ಕನಿಷ್ಟ 100 ಪುಟಗಳಿರುವ ಡಿಟಿಪಿ ಮಾಡಿದ ಕೃತಿಯನ್ನು ಸಲ್ಲಿಸಬಹುದು. 18ರಿಂದ 40 ವರ್ಷದ ಒಳಗಿನ ಯಾವುದೇ ಲೇಖಕರೂ ಕೂಡ ಪ್ರೋತ್ಸಾಹಧನಕ್ಕಾಗಿ ಅರ್ಜಿಗಳನ್ನು ಸಲ್ಲಿಸಬಹುದು.

ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶೆ, ಲೇಖನ, ಲಲಿತ ಪ್ರಬಂಧ, ಮಕ್ಕಳ ಸಾಹಿತ್ಯ ಮತ್ತು ಪ್ರಬಂಧ (ಜೀವನ ಚರಿತ್ರೆ, ಪ್ರವಾಸ ಕಥನ ಮತ್ತು ಅಂಕಣ ಬರಹ), ಸಾಹಿತ್ಯ ಮಾನವಿಕ, ವಿಜ್ಞಾನ, ವಿಚಾರ ಹಾಗೂ ಇತರೆ ಜ್ಞಾ  ಶಿಸ್ತು ಗಳಿಗೆ ಸಂಬಂಧಿಸಿರಬೇಕು.

ಅನುವಾದ, ಪಠ್ಯಪುಸ್ತಕ, ಅಭಿನಂದನಾ ಗ್ರಂಥ ಹಾಗೂ ಬೇರಾವುದೇ ಪದವಿ ಗಾಗಿ ಸಿದ್ಧಪಡಿಸಿರುವ ಪ್ರಬಂಧಗಳನ್ನು, ಯಾವುದೇ ಧರ್ಮ, ದೇವರು, ಜಾತಿ ಕೋಮು, ವೃತ್ತಿ ಸಮುದಾಯ, ಭಾಷೆ, ಆಚರಣೆ, ಪದ್ಧತಿ, ನಿರ್ದಿಷ್ಟ ಸಂಗತಿ, ರಾಷ್ಟ್ರೀಯ ನಾಯಕರು ಮುಂತಾದವುಗಳ ಕುರಿತು ನೇರವಾಗಿಯೇ ಆಗಲಿ ಪರೋಕ್ಷಗಾಗಿಯೇ ಆಗಲಿ ಮನನೋಯಿಸುವಂತಹ ಹಾಗೂ ರಾಷ್ಟ್ರೀಯ ಭಾವೈಕ್ಯತೆಗಳಿಗೆ ಧಕ್ಕೆ ತರುವಂತಹ ಪ್ರಸ್ತಾಪ ಇದ್ದಲ್ಲಿ ಅವುಳನ್ನು ಆಯ್ಕೆಗೆ ಪರಿಗಣಿಸುವಿದಲ್ಲ.

ಪ್ರಾಧಿಕಾರಕ್ಕೆ ಸಲ್ಲಿಸಲ್ಪಡುವ ಅರ್ಜಿಗಳನ್ನು/ ಹಸ್ತಪ್ರತಿಗಳನ್ನು ಹಿಂದಿರುಗಿಸುವುದಿಲ್ಲ. ಅರ್ಜಿಗಳನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು, ಈ ವಿಳಾಸಕ್ಕೆ ಜನವರಿ 25ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು, ವೆಬ್‌ಸೈಟ್-www.kannadapustakapradhikara.com  - ದೂರವಾಣಿ ಸಂಖ್ಯೆ: 080-22484516/22017704ನ್ನು ಸಂಪರ್ಕಿಸುವಂತೆ ಕನ್ನಡ ಪುಸ್ತಕ ಪ್ರಾಧಿಕಾರದ ಆಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News