ನೇಪಾಳಿಗಳನ್ನು ಹೋಲುತ್ತಿದ್ದೀರಿ ಎಂಬ ಕಾರಣ ನೀಡಿ ಪಾಸ್‌ಪೋರ್ಟ್ ನಿರಾಕರಿಸಿದ ಅಧಿಕಾರಿ !

Update: 2020-01-02 18:48 GMT

ಚಂಡೀಗಢ, ಜ.2: ನೇಪಾಳಿಗಳನ್ನು ಹೋಲುತ್ತಿದ್ದೀರಿ ಎಂಬ ಕಾರಣ ನೀಡಿ ಅಧಿಕಾರಿಗಳು ತನಗೆ ಹಾಗೂ ಸಹೋದರಿಗೆ ಪಾಸ್‌ಪೋರ್ಟ್ ನಿರಾಕರಿಸಿದ್ದಾರೆ ಎಂದು ಯುವತಿಯೊಬ್ಬಳು ಹೇಳಿದ್ದಾಳೆ.

 ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಚಂಡೀಗಢದಲ್ಲಿರುವ ಪಾಸ್‌ಪೋರ್ಟ್ ಕಚೇರಿಗೆ ಹೋಗಿದ್ದೆವು. ನಮ್ಮ ಮುಖ ನೋಡಿದ ಅಧಿಕಾರಿಗಳು ನಾವು ನೇಪಾಳಿಗಳೆಂದು ಅರ್ಜಿ ಫಾರಂನಲ್ಲಿ ನಮೂದಿಸಿದ್ದರು. ಆದರೆ ನಾವು ಭಾರತೀಯರೆಂದು ಹೇಳಿದಾಗ ರಾಷ್ಟ್ರೀಯತೆಯನ್ನು ಸಾಬೀತುಪಡಿಸುವಂತೆ ಸೂಚಿಸಿದರು . ಈ ವಿಷಯವನ್ನು ಸಚಿವ ಅನಿಲ್ ವಿಜ್ ಗಮನಕ್ಕೆ ತಂದ ನಂತರವೇ ಪಾಸ್‌ಪೋರ್ಟ್ ನೀಡುವ ಪ್ರಕ್ರಿಯೆಗೆ ಚಾಲನೆ ದೊರಕಿದೆ ಎಂದು ಯುವತಿ ಹೇಳಿದ್ದಾಳೆ.

ಭಗತ್ ಬಹಾದೂರ್ ಎಂಬ ವ್ಯಕ್ತಿ ತನ್ನ ಇಬ್ಬರು ಪುತ್ರಿಯರಿಗೆ ಪಾಸ್‌ಪೋರ್ಟ್ ಮಾಡಿಸಲು ಅವರೊಂದಿಗೆ ಚಂಡೀಗಢ ಪಾಸ್‌ಪೋರ್ಟ್ ಕಚೇರಿಗೆ ತೆರಳಿದ್ದಾಗ ಅಧಿಕಾರಿಗಳು ಪಾಸ್‌ ಪೋರ್ಟ್ ನೀಡಲು ನಿರಾಕರಿಸಿದ್ದು ದಾಖಲೆಯ ಮೇಲೆ ‘ಅರ್ಜಿದಾರರು ನೇಪಾಳಿಗಳಂತೆ ಕಾಣುತ್ತಿದ್ದಾರೆ’ ಎಂದು ಬರೆದಿದ್ದಾರೆ. ಘಟನೆಯ ಮಾಹಿತಿ ದೊರಕಿದೊಡನೆ, ಇಬ್ಬರು ಸಹೋದರಿಯರಿಗೆ ತಕ್ಷಣ ಪಾಸ್‌ಪೋರ್ಟ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ಅವರಿಗೆ ಶೀಘ್ರದಲ್ಲೇ ಪಾಸ್‌ಪೋರ್ಟ್ ದೊರಕಲಿದೆ ಎಂದು ಅಂಬಾಲಾದ ಉಪ ಆಯುಕ್ತ ಅಶೋಕ್ ಶರ್ಮ ಹೇಳಿದ್ದಾರೆ. ಅಲ್ಲದೆ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News