ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2020-01-03 18:32 GMT

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

ಥಿಂಕ್‌ಸ್ವಿಸ್ ರಿಸರ್ಚ್ ಸ್ಕಾಲರ್‌ಶಿಪ್ಸ್ 2020

ವಿವರ: ಸ್ವಿಝರ್‌ಲ್ಯಾಂಡ್‌ನ ಶಿಕ್ಷಣ, ಸಂಶೋಧನೆ ಮತ್ತು ನವೀನತೆ ಇಲಾಖೆ ಯು ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಸಂಶೋಧನಾ ಅಧ್ಯಯನ ನಡೆಸಲು ಪ್ರೋತ್ಸಾಹ ನೀಡುವ ಉದ್ದೇಶದಿಂದ(ಸ್ವಿಸ್ ವಿವಿಗಳೊಳಗೆ ಕಿರು ಅವಧಿಯ ಶೈಕ್ಷಣಿಕ ವಿನಿಮಯ ಯೋಜನೆಯಡಿ) ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನಿಸಿದೆ.

ಅರ್ಹತೆ: ಭಾರತದಲ್ಲಿ ಅಂಗೀಕೃತ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಅಧ್ಯಯನ ಕೋರ್ಸ್, ಪದವಿ, ಪದವಿ ಅಧ್ಯಯನ ಕೋರ್ಸ್‌ಗೆ ದಾಖಲಾಗಿರುವ ವಿದ್ಯಾರ್ಥಿಗಳು ಮತ್ತು ಸ್ವಿಝರ್‌ಲ್ಯಾಂಡ್‌ನಲ್ಲಿ ನೆಲೆಸಿದ್ದ (ಶೈಕ್ಷಣಿಕ ವಿನಿಮಯ ಯೋಜನೆಯಡಿ) ಸಂದರ್ಭ ಎರಡನೇ ವರ್ಷದ ಅಧ್ಯಯನ ಪೂರ್ತಿಗೊಳಿಸಿದವರು ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ಅಭ್ಯರ್ಥಿಗಳು, ಕಿರು ಶೈಕ್ಷಣಿಕ ವಿನಿಮಯ ಯೋಜನೆಯ ಅವಧಿಯನ್ನು ಆಧರಿಸಿ ಪ್ರತೀ ತಿಂಗಳು 1,600 ಸ್ವಿಸ್ ಫ್ರಾಂಕ್ ಮೊತ್ತವನ್ನು ಎರಡು ಅಥವಾ ಮೂರು ತಿಂಗಳಿಗೆ ಪಡೆಯುತ್ತಾರೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜನವರಿ 15, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/TSR1

************

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

ಟಾಟಾ ಸ್ಟೀಲ್ ಮಿಲೇನಿಯಂ ಸ್ಕಾಲರ್‌ಶಿಪ್ 2019- 2020

ವಿವರ: ಟಾಟಾ ಸ್ಟೀಲ್ ಲಿಮಿಟೆಡ್‌ನ ಕಾರ್ಮಿಕರು, ಸೂಪರ್‌ವೈಸರ್‌ಗಳು ಮತ್ತು ಅಧಿಕಾರಿಗಳ ಪುತ್ರರು, ಪುತ್ರಿಯರು ಅಥವಾ ಪತಿ/ಪತ್ನಿಗೆ (ಬಿಟೆಕ್, ಬಿಇ, ಎಂಟೆಕ್, ಎಂಬಿಬಿಎಸ್ ಅಥವಾ ಇತರ ವೃತ್ತಿಪರ ಕೋರ್ಸ್ ಅಧ್ಯಯನ ಮಾಡುವವರು) ಜಮ್‌ಶೆಡ್‌ಪುರದ ಟಾಟ ಸ್ಟೀಲ್ ಸಂಸ್ಥೆ ನೀಡುತ್ತಿರುವ ಸ್ಕಾಲರ್‌ಶಿಪ್ ಇದಾಗಿದೆ.

ಅರ್ಹತೆ: ಈಗ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು, ಸೂಪರ್‌ವೈಸರ್‌ಗಳು ಮತ್ತು ಅಧಿಕಾರಿಗಳ ಪುತ್ರರು, ಪುತ್ರಿಯರು ಅಥವಾ ಪತಿ/ಪತ್ನಿ, ಇಎಸ್‌ಎಸ್ ಜಾಬ್ ಅಥವಾ ಜಾಬ್/ಎಂಎಸ್‌ಎಸ್/ಇಎಫ್‌ಬಿಎಸ್/ಎಫ್‌ಬಿಎಸ್/ಎಫ್‌ಎಸ್‌ಎಸ್‌ನಡಿ ಪ್ರತ್ಯೇಕಿಸಲ್ಪಟ್ಟವರು ಅಥವಾ ಜೆಯುಎಸ್‌ಸಿಒ ಹುದ್ದೆಯ ಮೇಲೆ ವರ್ಗಾವಣೆಗೊಂಡವರ ಕುಟುಂಬದವರೂ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿ ಉಲ್ಲೇಖಿಸಿರುವ ಕಾಲೇಜಿನಲ್ಲಿ ಪೂರ್ಣಾವಧಿಯ ಇಂಜಿನಿಯರಿಂಗ್, ಮೆಡಿಕಲ್ ಅಥವಾ ವೃತ್ತಿಪರ ಕೋರ್ಸ್‌ಗೆ ದಾಖಲಾಗಿರಬೇಕು.

ನೆರವು: ‘ಎ’ ಗುಂಪಿನಲ್ಲಿ ಆಯ್ಕೆಯಾದ 120 ಬಿಟೆಕ್, ಎಂಟೆಕ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ವಾರ್ಷಿಕ 50,000 ರೂ.ವರೆಗಿನ ಪುರಸ್ಕಾರ ಪಡೆಯುತ್ತಾರೆ. ‘ಬಿ’ ಗುಂಪಿನಲ್ಲಿ ಆಯ್ಕೆಯಾದ 240 ಅಭ್ಯರ್ಥಿಗಳು ವಾರ್ಷಿಕ 24,000 ರೂ. ನೆರವು ಪಡೆಯಲಿದ್ದಾರೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜನವರಿ 9, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/TSM1

********

ವಿದ್ಯಾರ್ಥಿವೇತನ

(ಪ್ರತಿಭೆ ಆಧಾರಿತ):

2019ರ ವರ್ಗ, ಬೋರ್ಡ್, ವಿವಿ ಪರೀಕ್ಷೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ

ವಿವರ: 2019ರ ವರ್ಗ, ಬೋರ್ಡ್, ವಿವಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ದೂರಸಂಪರ್ಕ ಇಲಾಖೆಯ ಉದ್ಯೋಗಿಗಳ ಮಕ್ಕಳಿಗೆ ಭಾರತ ಸರಕಾರದ ದೂರಸಂಪರ್ಕ ಇಲಾಖೆ ನೀಡುವ ಪ್ರೋತ್ಸಾಹಧನ.

ಅರ್ಹತೆ: ದೂರ ಸಂಪರ್ಕ ಇಲಾಖೆಯ ಉದ್ಯೋಗಿಗಳ ಮಕ್ಕಳು ಅರ್ಹರು. ಭಾರತೀಯ ಪೌರರಾಗಿರಬೇಕು ಮತ್ತು ಶಾಲೆ, ಕಾಲೇಜು ಅಥವಾ ವಿವಿ ಮಟ್ಟದಲ್ಲಿ ಅಧ್ಯಯನ ನಡೆಸುತ್ತಿದ್ದು ಎಲ್ಲಾ ವಿಷಯಗಳಲ್ಲೂ ಅಧಿಕ ಗ್ರೇಡ್ ಅಂಕ ಗಳಿಸಿದವರು ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ಪ್ರಥಮ ಸ್ಥಾನ ಪಡೆದ ಅಭ್ಯರ್ಥಿಗಳಿಗೆ 2,000 ರೂ. ಪ್ರೋತ್ಸಾಹ ಧನ, ದ್ವಿತೀಯ ಸ್ಥಾನ ಪಡೆದವರಿಗೆ 1,000 ರೂ. ಪ್ರೋತ್ಸಾಹಧನ, ಮೂರನೇ ಸ್ಥಾನ ಪಡೆದವರಿಗೆ 600 ರೂ. ಪ್ರೋತ್ಸಾಹ ಧನ ದೊರೆಯಲಿದೆ

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜನವರಿ 31, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/IME1

**************

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

ಭಾರತೀಯ ವಿದ್ಯಾರ್ಥಿಗಳಿಗಿರುವ ಫೆಲಿಕ್ಸ್ ಶಿಷ್ಯವೇತನ 2020

ವಿವರ: ತನ್ನ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಸೇರಲು ಬಯಸುವ ಭಾರತದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಸಂಪೂರ್ಣ ವಿನಾಯತಿಯನ್ನು ಇಂಗ್ಲೆಂಡ್‌ನ ರೀಡಿಂಗ್ ವಿಶ್ವವಿದ್ಯಾನಿಲಯ ಒದಗಿಸುತ್ತದೆ. ಈ ಶಿಷ್ಯವೇತನದ ಯೋಜನೆಯಲ್ಲಿ ಲಂಡನ್‌ನಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಶೈಕ್ಷಣಿಕ ಶಿಷ್ಯವೇತನ ಸಹಿತ ಹಲವು ಅವಕಾಶಗಳನ್ನು ಪಡೆಯಲಿದ್ದಾರೆ.

ಅರ್ಹತೆ: ಭಾರತದ ವಿಶ್ವವಿದ್ಯಾನಿಲಯದಲ್ಲಿ ಪದವಿಯನ್ನು ಪ್ರಥಮ ದರ್ಜೆ ಅಥವಾ ದ್ವಿತೀಯ ದರ್ಜೆಯೊಂದಿಗೆ ಉತ್ತೀರ್ಣರಾದ ಭಾರತೀಯ ವಿದ್ಯಾರ್ಥಿಗಳು ಈ ಕೋರ್ಸ್ ಗೆ ಅರ್ಹರು. ಎಲ್ಲಾ ಅರ್ಜಿದಾರರು ಪ್ರವೇಶಾವಕಾಶವನ್ನು ಸ್ವೀಕರಿಸಬೇಕು ಹಾಗೂ ಲಂಡನ್‌ನ ರೀಡಿಂಗ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕು. ನೆರವು: ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳು ಬೋಧನಾ ಶುಲ್ಕ ಪೂರ್ಣ ವಿನಾಯತಿ ಪಡೆಯಲಿದ್ದಾರೆ. 14,570 ಜಿಬಿಪಿ (ಬ್ರಿಟಿಷ್ ಪೌಂಡ್ ಸ್ಟರ್ಲಿಂಗ್) ಶಿಷ್ಯ ವೇತನ ಪಡೆಯಲಿದ್ದಾರೆ ಹಾಗೂ ಮೂರು ವರ್ಷಗಳ ಅಧ್ಯಯನದ ಅವಧಿಯಲ್ಲಿ ಪ್ರಯಾಣ, ಪುಸ್ತಕಗಳು ಹಾಗೂ ಬಟ್ಟೆಗಳಿಗೆ ಭತ್ತೆ ಪಡೆಯಲಿದ್ದಾರೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜನವರಿ 30, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/FEL1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News