ಇಟಲಿಯಿಂದ ಬಂದವರಿಗೆ ಪೌರತ್ವ ಕೊಟ್ಟ ದೇಶದಲ್ಲಿ ಬೇರೆಯವರಿಗೆ ಕೊಡಬಾರದೇ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್

Update: 2020-01-04 16:33 GMT

ಕೋಲಾರ, ಜ.4: ಮಹಾತ್ಮ ಗಾಂಧೀಜಿ ಆಸೆಯಂತೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಬಿಜೆಪಿ ಸಂಘಟಿಸಿದ್ದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ. ಓಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಪೌರತ್ವವನ್ನು ವಿರೋಧಿಸುತ್ತಿದೆ. ಪೌರತ್ವ ಇಲ್ಲದವರಿಗೆ ಕೊಡಲಾಗುವುದು, ಇರುವವರ ಬಳಿ ಕಿತ್ತಕೊಳ್ಳುವುದಿಲ್ಲ ಎಂದು ಹೇಳಿದರು.

ಇಟಲಿಯಿಂದ ಬಂದವರಿಗೆ ಪೌರತ್ವ ಕೊಟ್ಟಿರುವ ದೇಶದಲ್ಲಿ ಬೇರೆಯವರಿಗೆ ಕೊಡಬಾರದೆ. ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯಕ್ಕೆ ಮಹತ್ವವಿದೆ. ಭಾರತದಲ್ಲಿ ನರೇಂದ್ರ ಮೋದಿಯವರ ಶಕ್ತಿ ಬಲವಾಗಿದೆ ಎಂದ ಅವರು, ಸಿಎಎ ವಿರೋಧಿಸುವ ಸ್ವಾತಂತ್ರ್ಯ ಹೋರಾಟಗಾರರು, ಚಿಂತಕರು, ಸಾಹಿತಿಗಳ ಬಗ್ಗೆ ಮಾತನಾಡುವುದಿಲ್ಲ. ಸುಳ್ಳು, ಅಪಪ್ರಚಾರ ಮಾಡುವವರು ರಾಷ್ಟ್ರ ವಿರೋಧಿಗಳು. ಕಾಂಗ್ರೆಸ್ ಪಕ್ಷ ಸುಳ್ಳು ಮತ್ತು ಅಪಪ್ರಚಾರವನ್ನು ಮಾಡುತ್ತಿರುವುದರಿಂದ ಅದು ರಾಷ್ಟ್ರ ವಿರೋಧಿ ಎಂದು ನಳಿನ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News