ಎಲ್ಲ ಸಾವುಗಳು ಪೊಲೀಸ್ ಗುಂಡಿನಿಂದ ಸಂಭವಿಸಿವೆ: ಅಖಿಲೇಶ್ ಯಾದವ್

Update: 2020-01-05 17:32 GMT

ಲಕ್ನೋ, ಜ.5: ಉತ್ತರ ಪ್ರದೇಶದಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿಯ ಎಲ್ಲ ಸಾವುಗಳು ಪೊಲೀಸ್ ಗುಂಡುಗಳಿಂದಲೇ ಸಂಭವಿಸಿವೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ರವಿವಾರ ಇಲ್ಲಿ ಆರೋಪಿಸಿದರು.

ಲಕ್ನೋದಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಸಂದರ್ಭ ಕೊಲ್ಲಲ್ಪಟ್ಟಿದ್ದ ಮುಹಮ್ಮದ್ ವಕೀಲ್ ಮನೆಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, ವಕೀಲ್ ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ. ಯಾರ ಗುಂಡು ಅವರಿಗೆ ತಗಲಿತ್ತು ಎಂಬ ಬಗ್ಗೆ ಸರಕಾರವು ತನಿಖೆ ನಡೆಸಬೇಕು. ಪೊಲೀಸರ ಬಳಿ ಮರಣೋತ್ತರ ಪರೀಕ್ಷಾ ವರದಿಯಿದೆ ಎಂದರು.

ಪ್ರತಿಭಟನೆ ಸಂದರ್ಭದ ಎಲ್ಲ ಸಾವುಗಳು ಪೊಲೀಸರ ಗುಂಡುಗಳಿಂದಲೇ ಸಂಭವಿಸಿವೆ ಎಂದು ಪ್ರತಿಪಾದಿಸಿದ ಅವರು,ಸರಕಾರವು ಬಾಡಿಗೆಮನೆಯಲ್ಲಿ ವಾಸವಾಗಿರುವ ವಕೀಲ್ ಕುಟುಂಬಕ್ಕೆ ಪರಿಹಾರ,ಮನೆ ಮತ್ತು ಉದ್ಯೋಗವನ್ನು ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ವೇಳೆ ಮೃತಪಟ್ಟಿರುವ ಎಲ್ಲರ ಕುಟುಂಬಗಳಿಗೆ ಸಾಕಷ್ಟು ಪರಿಹಾರವನ್ನು ಒದಗಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News