ಕಲಬುರಗಿಯಲ್ಲಿ ಮುಷ್ಕರಕ್ಕೆ ಬೆಂಬಲ, ಶಾಲಾ ಕಾಲೇಜುಗಳಿಗೆ ಸ್ವಯಂಪ್ರೇರಿತ ರಜೆ ಘೋಷಣೆ

Update: 2020-01-08 05:29 GMT

ಕಲಬುರಗಿ, ಜ.8: ಕಾರ್ಮಿಕ ಸುಧಾರಣೆ,ವಿದೇಶಿ ನೇರ ಹೂಡಿಕೆ ಮತ್ತು ಖಾಸಗೀಕರಣ ಸೇರಿದಂತೆ ಕೇಂದ್ರ ಸರಕಾರದ ನೀತಿಗಳನ್ನು ವಿರೋಧಿಸಿ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರೀಯ ಮುಷ್ಕರಕ್ಕೆ ಕಲಬುರಗಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಹುತೇಕ ಶಾಲಾ ಕಾಲೇಜುಗಳಿಗೆ ಸ್ವಯಂ ಪ್ರೇರಿತವಾಗಿ ಬಂದ್ ಘೋಷಿಸಿ ಬಂದ್ ಗೆ ಬೆಂಬಲ ನೀಡಿದ್ದಾರೆ.

ಇಂದಿನ ಮುಷ್ಕರಕ್ಕೆ  ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಸವೆರ ಸಂಘಟನೆ ಹಾಗೂ ಪೀಪಲ್ ಪಕ್ಷದ ವತಿಯಿಂದ ಬೆಂಬಲ ವ್ಯಕ್ತವಾಗಿದ್ದು ಸಿಪಿಎಂ ಜಿಲ್ಲಾಧ್ಯಕ್ಷ ಮಾರುತಿ ಮಾನ್ಪಡೆ ಕಾರ್ಯದರ್ಶಿ ಮೌಲಾ ಮುಲ್ಲಾ ನೇತೃತ್ವದಲ್ಲಿ ಮುಷ್ಕರ ನಡೆಯುತ್ತಿದೆ.

ಕೇಂದ್ರೀಯ ಬಸ್ ನಿಲ್ದಾಣದ ಹತ್ತಿರ ಎಲ್ಲ ಅಂಗಡಿಗಳು ಮುಚ್ಚಿವೆ.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶರಣಬಸಪ್ಪ ಮಮಶೇಟಿ, ಸವೆರ ಸಂಘಟನೆ ಅಧ್ಯಕ್ಷ ಮೊಯ್ದಿನ್ ಪಟೇಲ್, ಅಣಬಿ ಶೇಕ್, ಯೂನುಸ್ ಅಲಿ, ಶೇಕ್ ಹುಸೈನ್ ಬಾಬಾ, ಸೈಯದ್ ಇಜಾಝ್ ಅಲಿ ಇನಾಮ್ದಾರ್, ಸಾಜಿದ್ ಅಲಿ ರಂಜೋಳವಿ, ಶೇಕ್  ಸಿರಾಜ್ ಪಾಶ, ಹೈದರ್ ಅಲಿ ಇನಾಮದಾರ್,  ಖಾಲಿಕ ಅಹ್ಮದ್, ರಝಾಕ್ ಚೌದರಿ, ಮೆಹರಾಜ್ ಕಲ್ಯಾಣ ವಾಲಾ, ಗೀತಾ, ಸಂಗೀತ ಪಾಟೀಲ, ಸೈರಾ ಬಾನು, ರಾಬಿಯಾ ಶಿಕಾರಿ, ಸುಗ್ರ ಬೇಗಂ, ರಾಫಿಯ ಶಿರಿನ್, ಫೌಝಿಯ ಬೇಗಂ, ಆಯಿಷಾ ಶಿಕಾರಿ, ಮುಮ್ತಾಝ್ ಬೇಗಂ, ಶಕೀಲಾ ಬಾನು, ಅಬ್ದುಲ್ ಜಬ್ಬಾರ್ ಕಿಣಗಿ, ಜಾಫರ್ ಪಟೇಲ, ಬಾಷಾ ಪಟೇಲ, ವಿಜಯ್ ಕುಮಾರ್ ಮತ್ತಿತರರು ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News