ದವೀಂದರ್ ಸಿಂಗ್ 'ಖಾನ್' ಆಗಿದ್ದರೆ ಆರೆಸ್ಸೆಸ್ ಟ್ರೋಲ್ ಪಡೆಯ ಪ್ರತಿಕ್ರಿಯೆ ಭಿನ್ನವಾಗಿರುತ್ತಿತ್ತು: ಅಧೀರ್ ಚೌಧುರಿ

Update: 2020-01-14 14:05 GMT

ಹೊಸದಿಲ್ಲಿ: ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರನ್ನು ತನ್ನ ಜತೆಗೆ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ  ಸಿಕ್ಕಿ ಬಿದ್ದ ಜಮ್ಮು ಕಾಶ್ಮೀರದ ಡಿವೈಎಸ್ಪಿ ದವೀಂದರ್ ಸಿಂಗ್ ಆಗಿರದೆ `ದವೀಂದರ್ ಖಾನ್' ಆಗಿದ್ದಿದ್ದರೆ ಆರೆಸ್ಸೆಸ್ಸಿನ ಟ್ರೋಲ್ ಪಡೆಯ ಪ್ರತಿಕ್ರಿಯೆ ಸಂಪೂರ್ಣವಾಗಿ ಭಿನ್ನವಾಗಿರುತ್ತಿತ್ತು ಎಂದು ಲೋಕಸಭೆಯಲ್ಲಿನ ವಿಪಕ್ಷ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಹೇಳಿದ್ದಾರೆ.

"ದವೀಂದರ್ ಸಿಂಗ್ ದವೀಂದರ್ ಖಾನ್ ಆಗಿದ್ದೇ ಆದಲ್ಲಿ ಆರೆಸ್ಸೆಸ್ಸಿನ ಟ್ರೋಲ್ ಪಡೆ ಆಕ್ರಮಣಕಾರಿಯಾಗಿ  ಪ್ರತಿಕ್ರಿಯಿಸುತ್ತಿತ್ತು. ನಮ್ಮ ದೇಶದ ವೈರಿಗಳನ್ನು ಅವರ  ಜಾತಿ, ಧರ್ಮ ಪರಿಗಣಿಸದೆ ಖಂಡಿಸಬೇಕು'' ಎಂದು ಚೌಧುರಿ ಟ್ವೀಟ್ ಮಾಡಿದ್ದಾರೆ.

"ಕಳೆದ ವರ್ಷ ಸಂಭವಿಸಿದ ಪುಲ್ವಾಮ ದಾಳಿಯ ಹಿಂದಿನ ನಿಜವಾದ ಅಪರಾಧಿಗಳು ಯಾರೆಂಬ ಪ್ರಶ್ನೆ ಈಗ ಎದುರಾಗುತ್ತದೆ, ದವೀಂದರ್ ಸಿಂಗ್ ಆಗ ಪುಲ್ವಾಮಾದ ಡಿವೈಎಸ್ಪಿ ಆಗಿದ್ದರು'' ಎಂದು ಚೌಧುರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News