ಭೂಮಿಯಲ್ಲಿ ಸೂರ್ಯನಿಗೂ ಮೊದಲೇ ರೂಪುಗೊಂಡ ಕಲ್ಲು ಪತ್ತೆ

Update: 2020-01-14 16:24 GMT

ವಾಶಿಂಗ್ಟನ್, ಜ. 14: ಭೂಮಿಯಲ್ಲಿ ಸಿಕ್ಕಿರುವ ಅತ್ಯಂತ ಹಿಂದಿನ ಘನವಸ್ತುವೊಂದನ್ನು ನೂತನ ತಂತ್ರಜ್ಞಾನದ ಮೂಲಕ ಗುರುತಿಸಲಾಗಿದೆ ಎಂದು ಸಂಶೋಧಕರು ಸೋಮವಾರ ಹೇಳಿದ್ದಾರೆ.

500ರಿಂದ 700 ಕೋಟಿ ವರ್ಷಗಳ ಹಿಂದೆ ರೂಪುಗೊಂಡಿರುವ ಈ ವಸ್ತು, 50 ವರ್ಷಗಳ ಹಿಂದೆ ಬಾಂಗಲ್ಲೊಂದರಿಂದ ಆಸ್ಟ್ರೇಲಿಯದಲ್ಲಿ ಭೂಮಿಗೆ ಉದುರಿದೆ ಎಂದು ಪಿಎನ್‌ಎಎಸ್ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನವೊಂದರಲ್ಲಿ ಅವರು ಹೇಳಿದ್ದಾರೆ.

ಈ ಆಕಾಶದ ಕಲ್ಲು 1969ರಲ್ಲಿ ಆಸ್ಟ್ರೇಲಿಯದ ವಿಕ್ಟೋರಿಯ ರಾಜ್ಯದ ಮರ್ಚಿಸನ್‌ನಲ್ಲಿ ಉದುರಿತು. ಅದರ ತುಂಡೊಂದು ಶಿಕಾಗೊದ ಫೀಲ್ಡ್ ಮ್ಯೂಸಿಯಮ್‌ನ ವಿಜ್ಞಾನಿಗಳ ಬಳಿ ಐದು ದಶಕಗಳಿಂದಲೂ ಇದೆ.

ಸೂರ್ಯನ ಉಗಮಕ್ಕಿಂತಲೂ ಮೊದಲು ರೂಪುಗೊಂಡಿರುವ ಈ ವಸ್ತು ಆ ಅವಧಿಯ ಸಮಯವನ್ನು ಹೊತ್ತುಕೊಂಡು ಬಂದಿದೆ ಎಂದು ಮ್ಯೂಸಿಯಮ್‌ನಲ್ಲಿ ಬಾಂಗಲ್ಲುಗಳ ವಿಶ್ಲೇಷಕರಾಗಿರುವ ಫಿಲಿಪ್ ಹೆಕ್ ಹೇಳುತ್ತಾರೆ. ನಕ್ಷತ್ರಗಳ ಧೂಳಿನ ಕಣಗಳು ಬಾಂಗಲ್ಲೊಂದರಲ್ಲಿ ಸಿಕ್ಕಿಹಾಕಿಕೊಂಡು ಈ ವಸ್ತು ರೂಪುಗೊಂಡಿದೆ ಎಂದು ಅವರು ಹೇಳುತ್ತಾರೆ.

‘‘ಆ ಕಣಗಳು ತಾರೆಗಳ ಮಾದರಿಗಳಾಗಿವೆ ಹಾಗೂ ನಿಜವಾದ ನಕ್ಷತ ಕಣಗಳಾಗಿವೆ’’ ಎಂದು ಹೆಕ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಆರಂಭಿಕ ತಾರೆಗಳು 200 ಕೋಟಿ ವರ್ಷಗಳ ಬದುಕಿನ ಬಳಿಕ ಸತ್ತಾಗ, ಅವುಗಳು ತಾರಾಕಣಗಳನ್ನು ಬಿಟ್ಟು ಹೋದವು. ಆ ಕಣಗಳು ಸಂಗಮಿಸಿ ಘನ ರೂಪವನ್ನು ಪಡೆದವು ಹಾಗೂ ಬಾಂಗಲ್ಲಾಗಿ ಆಸ್ಟ್ರೇಲಿಯದಲ್ಲಿ ಉದುರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News