ಉಗ್ರರ ಜೊತೆಗಿದ್ದ ದವೀಂದರ್ ಪ್ರಕರಣ ಮುಚ್ಚಿ ಹಾಕಲು ಎನ್‌ಐಎಗೆ ನೀಡಿ: ರಾಹುಲ್ ಗಾಂಧಿ ವ್ಯಂಗ್ಯ

Update: 2020-01-17 18:39 GMT

 ಹೊಸದಿಲ್ಲಿ, ಜ. 17: ಜಮ್ಮು ಹಾಗೂ ಕಾಶ್ಮೀರದ ಡಿಎಸ್ಪಿ ದವೀಂದರ್ ಸಿಂಗ್ ಪ್ರಕರಣವನ್ನು ಮುಚ್ಚಿ ಹಾಕಲು ಇರುವ ಉತ್ತಮ ದಾರಿಯೆಂದರೆ, ಪ್ರಕರಣವನ್ನು ಎನ್‌ಐಎಯ ವರಿಷ್ಠ ವೈ.ಸಿ. ಮೋದಿಗೆ ಹಸ್ತಾಂತರಿಸುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ವ್ಯಂಗ್ಯವಾಡಿದ್ದಾರೆ.

  ಎನ್‌ಐಎಯ ವರಿಷ್ಠರನ್ನು ತರಾಟೆಗೆ ತೆಗೆದುಕೊಂಡಿರುವ ರಾಹುಲ್ ಗಾಂಧಿ, ಈ ಹಿಂದೆ ಅವರು ಗುಜರಾತ್ ಹತ್ಯಾಕಾಂಡ ಹಾಗೂ ಹರೇನ್ ಪಾಂಡ್ಯ ಹತ್ಯೆ ಪ್ರಕರಣಗಳನ್ನು ತನಿಖೆ ಮಾಡಿದ್ದಾರೆ ಎಂದರು.

‘‘ಭಯೋತ್ಪಾದಕ ಡಿಎಸ್ಪಿ ದವೀಂದರ್‌ನ ಪ್ರಕರಣವನ್ನು ಮುಚ್ಚಿಹಾಕುವ ಉತ್ತಮ ದಾರಿ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವುದು ಈ ಸಂಸ್ಥೆಗೆ ಗುಜರಾತ್ ಹತ್ಯಾಕಾಂಡ ಹಾಗೂ ಹರೇನ್ ಪಾಂಡ್ಯನ್ ಹತ್ಯೆ ಪ್ರಕರಣದ ತನಿಖೆ ನಡೆಸಿದ ಇನ್ನೋರ್ವ ಮೋದಿ ಮುಖ್ಯಸ್ಥ’’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ದಕ್ಷಿಣ ಕಾಶ್ಮೀರದ ಕುಲ್ಗಾಂವ್‌ನಿಂದ ಶನಿವಾರ ಸಿಂಗ್‌ನನ್ನು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರಾದ ನವೀದ್ ಬಾಬಾ, ಅಲ್ತಾಫ್ ಹಾಗೂ ಈ ಭಯೋತ್ಪಾದಕ ಸಂಘಟನೆಗೆ ಬಾಹ್ಯ ಬೊಂಬಲ ನೀಡುತ್ತಿರುವ ವಕೀಲನೊಂದಿಗೆ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News