ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು ಲೈಬ್ರೆರಿ ಅಧ್ಯಕ್ಷರಾಗಿ ನೃಪೇಂದ್ರ ಮಿಶ್ರಾ ನೇಮಕ

Update: 2020-01-18 18:31 GMT

ಹೊಸದಿಲ್ಲಿ, ಜ.18: ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು ಲೈಬ್ರೆರಿ (ಎನ್‌ಎಂಎಂಎಲ್)ಯ ಕಾರ್ಯನಿರ್ವಾಹಕ ಸಮಿತಿಯ ಅಧ್ಯಕ್ಷರನ್ನಾಗಿ ನೃಪೇಂದ್ರ ಮಿಶ್ರಾರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಮಿಶ್ರಾ ಈ ಹಿಂದೆ ಪ್ರಧಾನಿ ಮೋದಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

ಎನ್‌ಎಂಎಂಎಲ್ ಅನ್ನು ಪುನರ್‌ರಚಿಸಲಾಗಿದ್ದು ನೃಪೇಂದ್ರ ಮಿಶ್ರಾ ಅಧ್ಯಕ್ಷರಾಗಿ, ಪ್ರಸಾರಭಾರತಿ ಅಧ್ಯಕ್ಷ ಎ ಸೂರ್ಯಪ್ರಕಾಶ್ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ ಎಂದು ಜನವರಿ 14ರ ಆದೇಶದಲ್ಲಿ ತಿಳಿಸಲಾಗಿದೆ. ರಾಜ್ಯಸಭೆಯ ಸದಸ್ಯರಾದ ವಿನಯ್ ಸಹಸ್ರಬುದ್ಧೆ ಮತ್ತು ಸ್ವಪನ್ ದಾಸ್‌ಗುಪ್ತ, ಶಿಕ್ಷಣ ತಜ್ಞ ಕಪಿಲ್ ಕಪೂರ್ ಸಮಿತಿಯ ಸದಸ್ಯರಾಗಿರುತ್ತಾರೆ. ಇವರ ಜೊತೆಗೆ, ಎನ್‌ಎಂಎಂಎಲ್‌ನ ನಿರ್ದೇಶಕ, ಸಂಸ್ಕೃತಿ ಸಚಿವಾಲಯದ ಇಬ್ಬರು ಹಿರಿಯ ಅಧಿಕಾರಿಗಳು ಪದನಿಮಿತ್ತ ಸದಸ್ಯರಾಗಿರುತ್ತಾರೆ. ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು ಲೈಬ್ರೆರಿಯಲ್ಲಿ ದೇಶದ ಎಲ್ಲಾ ಪ್ರಧಾನ ಮಂತ್ರಿಗಳ ಮ್ಯೂಸಿಯಂ ಸ್ಥಾಪಿಸುವ ಕಾರ್ಯ ಈಗ ಪ್ರಗತಿಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News