ನಟಿ ಶಬನಾ ಆಝ್ಮಿಯ ಕಾರು ಚಾಲಕನ ವಿರುದ್ಧ ಎಫ್ ಐಆರ್

Update: 2020-01-19 06:25 GMT

ಮಂಬೈ, ಜ.19: ಮುಂಬೈ-ಪುಣೆ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ  ಕಾರು- ಟ್ರಕ್  ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿರುವ  ನಟಿ ಶಬಾನಾ ಅಝ್ಮಿ   ಮತ್ತು  ಅವರ ಕಾರು  ಚಾಲಕ ಅಮ್ಲೇಶ್ ಕಾಮತ್ ಉಪನಗರ ಅಂಧೇರಿಯ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೀಗ ಚಾಲಕ ಅಮ್ಲೇಶ್ ಕಾಮತ್  ವಿರುದ್ಧ ನಿರ್ಲಕ್ಷ್ಯದ  ವಾಹನ ಚಾಲನೆಯ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ಟ್ರಕ್ ಚಾಲಕ  ರಾಜೇಶ್ ಪಾಂಡುರಂಗ್ ಶಿಂಧೆನೀಡಿದ ದೂರಿನ ಮೇರೆಗೆ ಖಲಾಪುರದ ಪೊಲೀಸರು  ಶಬಾನಾ ಅಝ್ಮಿ ಕಾರು  ಚಾಲಕ ಅಮ್ಲೇಶ್ ಕಾಮತ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.ಚಾಲಕ ಅಮ್ಲೇಶ್ ಕಾಮತ್ ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಟ್ರಕ್ ಚಾಲಕ ಆರೋಪ ಮಾಡಿದ್ದಾನೆ. 

ಗಾಯಗೊಂಡಿರುವ  ನಟಿ ಶಬಾನಾ ಅಝ್ಮಿ   ಮತ್ತು  ಅವರ ಕಾರು  ಚಾಲಕನನ್ನು ಮೊದಲು ನವೀ ಮುಂಬೈ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ  ಅವರನ್ನು ಉಪನಗರ ಅಂಧೇರಿಯ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ಸಾಗಿಸಲಾಯಿತು.

ನಟಿ ಚಾಲಕನ ಪಕ್ಕದಲ್ಲಿ ಕುಳಿತಿದ್ದರು ಮತ್ತು ಕುತ್ತಿಗೆ ಮತ್ತು  ಮುಖಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ. ಆಕೆಯ ಸ್ಥಿತಿ ಈಗ ಸ್ಥಿರವಾಗಿದೆ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಪತಿ ಗೀತರಚನೆಕಾರ ಜಾವೇದ್ ಅಖ್ತರ್ ಸಣ್ಣ ಗಾಯದಿಂದ ಪಾರಾಗಿದ್ದಾರೆ  ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News