ಅಲಹಾಬಾದ್ ಹೆಸರನ್ನು ಪ್ರಯಾಗರಾಜ್ ಎಂದು ಬದಲಾಯಿಸಿದ ಆದಿತ್ಯನಾಥ್ ಸರ್ಕಾರಕ್ಕೆ ಸುಪ್ರೀಂ ನೋಟಿಸ್

Update: 2020-01-20 07:41 GMT

ಹೊಸದಿಲ್ಲಿ, ಜ.20: ಅಲಹಾಬಾದ್‌ನ ಹೆಸರನ್ನು ಪ್ರಯಾಗರಾಜ್ ಎಂದು ಬದಲಾಯಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಉತ್ತರ  ಪ್ರದೇಶದ  ಮುಖ್ಯ ಮಂತ್ರಿ ಆದಿತ್ಯನಾಥ್ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಆದಿತ್ಯನಾಥ್  ಸರ್ಕಾರವು ಅಲಹಾಬಾದ್ ಹೆಸರನ್ನು 2018 ರಲ್ಲಿ ಪ್ರಯಾಗರಾಜ್ ಎಂದು ಬದಲಾಯಿಸಿತ್ತು.

ಅಲಹಾಬಾದ್ ಹೆಸರನ್ನು ಪ್ರಯಾಗರಾಜ್ ಎಂದು ಬದಲಾಯಿಸಿರುವುದನ್ನು ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದೆ.

ರೈಲ್ವೆ ನಿಲ್ದಾಣಗಳು, ಕೇಂದ್ರ ವಿಶ್ವವಿದ್ಯಾಲಯಗಳು ಮತ್ತು ಇತರ ಸಂಸ್ಥೆಗಳ ಹೆಸರನ್ನು ಕೇಂದ್ರ ಸರ್ಕಾರವು ನಿಯಂತ್ರಿಸುವುದರಿಂದ ಅವುಗಳನ್ನು ಬದಲಾಯಿಸಲು ರಾಜ್ಯ ಸರ್ಕಾರ ಸಾಧ್ಯವಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.

500 ವರ್ಷಗಳ ಹಿಂದೆ ಮೊಘಲ್ ಚಕ್ರವರ್ತಿ ಅಕ್ಬರ್ ಮಾಡಿದ ತಪ್ಪು ಮಾಡಿದ್ದಾನೆ. ಅದನ್ನು   ಸರಿಪಡಿಸುವುದು  ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದ ಉತ್ತರ ಪ್ರದೇಶ ಸರ್ಕಾರವು ಐತಿಹಾಸಿಕ ನಗರವಾಗಿರುವ  ಅಲಹಾಬಾದ್ ನ ಹೆಸರನ್ನು ಪ್ರಯಾಗರಾಜ್  ಎಂದು ಬದಲಾಯಿಸಿತು.

ಅಕ್ಬರ್ ಬದಲಾಯಿಸಿದ ನಗರದ ಹಳೆಯ ಹೆಸರನ್ನು ಪುನಃಸ್ಥಾಪಿಸುವುದಾಗಿ ಬಿಜೆಪಿ ಸರ್ಕಾರ ಹೇಳಿತ್ತು. ಸರ್ಕಾರವು ಇತಿಹಾಸವನ್ನು ಹಾಳು ಮಾಡುತ್ತಿದೆ ಎಂದು ಹೇಳಿದ ಪ್ರತಿಪಕ್ಷಗಳು, ವಿದ್ವಾಂಸರು ಮತ್ತು ಇತಿಹಾಸಕಾರರಿಂದ ಈ ಕ್ರಮವು ತೀವ್ರ ಟೀಕೆಗೆ ಗುರಿಯಾಗಿತ್ತು.

ಅಲಹಾಬಾದ್‌ಗೆ 1575 ರಲ್ಲಿ ಈ ಹೆಸರು ಬಂದಿತು. ಮೊಘಲ್ ಚಕ್ರವರ್ತಿ ಅಕ್ಬರ್ ಇದನ್ನು ಇಲಾಹಬಾಸ್ ಎಂದು ಕರೆದನು. ಅಂದರೆ ದೇವರ ವಾಸಸ್ಥಾನ. ಅಕ್ಬರ್ ನಗರವನ್ನು ಪುನ ನಾಮಕರಣ ಮಾಡುವ ಮೊದಲು ಅದನ್ನು ಪ್ರಯಾಗ್ ಎಂದು ಕರೆಯಲಾಗುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News