ಕಲಬುರಗಿಯಲ್ಲಿಂದು ಸಿಎಎ, ಎನ್.ಆರ್.ಸಿ, ಎನ್.ಪಿ.ಆರ್. ವಿರುದ್ಧ ಬೃಹತ್ ಪ್ರತಿಭಟನೆ

Update: 2020-01-21 04:47 GMT

ಕಲಬುರಗಿ, ಜ.21: ಸಿಎಎ, ಎನ್.ಆರ್.ಸಿ. ಹಾಗೂ ಎನ್.ಪಿ ಆರ್. ವಿರುದ್ಧ ಪೀಪಲ್ಸ್ ಫೋರಂ ವತಿಯಿಂದ ಕಲಬುರಗಿಯಲ್ಲಿಂದು ನಡೆಯಲಿರುವ ಬೃಹತ್ ಜನಾಂದೋಲ ಸಮಾವೇಶಕ್ಕೆ ವೇದಿಕೆ ಸಜ್ಜಾಗಿದೆ.

ಇಂದು ಅಪರಾಹ್ನ 2 ಗಂಟೆಗೆ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ, ಸಿಪಿಐನ ಅತೂಲ್ ಕುಮಾರ ಅಂಜನ್ , ಕೆ.ಬಿ.ಎನ್ ದರ್ಗಾದ ಪೀಠಾಧಿಪತಿ ಸೈಯದ್ ಶಾ ಖಸ್ರೋ ಹುಸೈನಿ, ಸ್ವಾಮಿ ಆಗ್ನಿವೇಶ, ಧರ್ಮ ಪೀಠದ ಬಸವ ಕಲ್ಯಾಣ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ, ಚನ್ನ ಬಸವೇಶ್ವರ ಜ್ಞಾನಪೀಠ ಆಶ್ರಮದ ಜಗತ್ ಗುರು ಶ್ರೀ ಚನ್ನಬಸವನಂದನ್ ಮಹಾ ಸ್ವಾಮಿ, ಲಿಂಗಾಯತ್ ಮಹಾಸಭಾ ಅಧ್ಯಕ್ಷ ಶ್ರೀ ಕರುಣೆಶ್ವರ, ಶಾ ಖಾದ್ರಿ ಮುಸ್ತಫಾ ರಫಿಯಾ ಜೀಲಾನಿ, ತಮಿಳನಾಡು ಡಿಎಂಕೆ ಪಕ್ಷದ ಸಂಸದರು ಸೇರಿದಂತೆ ಒಟ್ಟು 15 ರಾಷ್ಟೀಯ ಪಕ್ಷಗಳ ನಾಯಕರು ಸಮಾವೇಶದಲ್ಲಿ ಭಾಗವಹಿಸಲ್ಲಿದ್ದಾರೆ.

ನಗರದ ಪೀರ್ ಬಂಗಾಲಿ ಮೈದಾನದಲ್ಲಿ ಭವ್ಯ ವೇದಿಕೆ ನಿರ್ಮಣವಾಗಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ಜನ ಸಮಾವೇಶದಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದು, ಜಿಲ್ಲೆಯ ತಾಲೂಕಿನ ಜನರು ಪಾದ ಯಾತ್ರೆಯ ಮೂಲಕ ಇಲ್ಲಿ ಆಗಮಿಸಲಿದ್ದಾರೆ.

ಅದೇ ರೀತಿಯಲ್ಲಿ ಸಮಾವೇಶದಲ್ಲಿ ದಲಿತ ಸಂಘಟನೆ, ಎಡ ಪಕ್ಷಗಳು ಸೇರಿದಂತೆ ಪ್ರಗತಿ ಮತ್ತು ಜನಪರ ಸಂಘಟನೆ ಹಾಗೂ ವಿವಿಧ ಧರ್ಮದ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News