ಚೋಟಾ ರಾಜನ್ ವಿರುದ್ಧದ ಮತ್ತೆ 4 ಪ್ರಕರಣಗಳ ತನಿಖೆ ಆರಂಭಿಸಿದ ಸಿಬಿಐ

Update: 2020-01-22 18:37 GMT

ಮುಂಬೈ, ಜ. 22: 1995ರಿಂದ 1998ರ ನಡುವೆ ದಾಖಲಿಸಿರುವ ಪ್ರಕರಣಗಳು ಸೇರಿದಂತೆ ಭೂಗತ ಪಾತಕಿ ಚೋಟಾ ರಾಜನ್ ವಿರುದ್ಧ ಮುಂಬೈ ಪೊಲೀಸರು ದಾಖಲಿಸಿದ ಪ್ರತ್ಯೇಕ ನಾಲ್ಕು ಪ್ರಕರಣಗಳ ತನಿಖೆಯನ್ನು ಸಿಬಿಐ ಆರಂಭಿಸಿದೆ.

ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ 1995, 1996, 1997 ಹಾಗೂ 1998ರಲ್ಲಿ ದಾಖಲಿಸಲಾದ ಈ ಪ್ರಕರಣಗಳನ್ನು ಸಿಬಿಐ ಮಂಗಳವಾರ ತನಿಖೆಗೆ ಕೈಗೆತ್ತಿಕೊಂಡಿದೆ ಹಾಗೂ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪೊಲೀಸರು ಚೋಟಾ ರಾಜನ್‌ಗೆ ಸಂಬಂಧಿಸಿದ ಐದು ಪ್ರಕರಣಗಳ ತನಿಖೆ ಆರಂಭಿಸಿತ್ತು.

ಇದರಲ್ಲಿ ಮಾರ್ಗದರ್ಶಿ ರಾಜನ್ ನಾಯರ್ ಆಲಿಯಾಸ್ ಬಡಾ ರಾಜನ್ ಜೊತೆ ಸೇರಿ ಮೂರು ದಶಕಗಳ ಕಾಲ ಅಕ್ರಮ ವ್ಯವಹಾರದಲ್ಲಿ ತೊಡಗಿದ್ದ ಚೋಟಾ ರಾಜನ್‌ನ ಆರಂಭಿಕ ದಿನಗಳ ಪ್ರಕರಣಗಳು ಕೂಡ ಸೇರಿದ್ದುವು. 1980, 1990 ಹಾಗೂ 2000ಗಳಲ್ಲಿ ಈ ಬಗೆಗಿನ ಪ್ರಕರಣಗಳು ಮುಂಬೈ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿತ್ತು. ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ ಹಿನ್ನೆಲೆಯಲ್ಲಿ ಇಂಡೋನೇಶ್ಯಾದಿಂದ ಗಡಿಪಾರಾದ ಬಳಿಕ 2015 ಡಿಸೆಂಬರ್ 25ರಂದು ಚೋಟಾ ರಾಜನ್‌ನನ್ನು ಬಂಧಿಸಲಾಗಿತ್ತು. ಅನಂತರ ಚೋಟಾ ರಾಜನ್‌ಗೆ ಸಂಬಂಧಿಸಿದ 71 ಪ್ರಕರಣಗಳನ್ನು ಮಹಾರಾಷ್ಟ್ರ ಸರಕಾರ ಸಿಬಿಐಗೆ ಹಸ್ತಾಂತರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News