ದಿಲ್ಲಿ : ಸ್ಕೂಲ್ ಡ್ರಾಪ್ ಔಟ್ ಬಿಜೆಪಿ ಅಭ್ಯರ್ಥಿಗೆ ಚೀನಾ ವಿವಿಯಿಂದ ಡಿಪ್ಲೋಮಾ !

Update: 2020-01-22 19:02 GMT

ಹೊಸದಿಲ್ಲಿ, ಜ. 23: ದೆಹಲಿಯ ಹರಿನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪಕ್ಷದ ವಕ್ತಾರ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ಸ್ಕೂಲ್ ಡ್ರಾಪ್ ಔಟ್. ಆದರೆ ಅವರು ಚೀನಾದ ನ್ಯಾಷನಲ್ ಡಿಫೆನ್ಸ್ ವಿಶ್ವವಿದ್ಯಾಲಯದಿಂದ ‘ನ್ಯಾಷನಲ್ ಡೆವಲಪ್ ಮೆಂಟ್ ಕೋರ್ಸ್’ ನಲ್ಲಿ ಡಿಪ್ಲೋಮಾ ಮಾಡಿದ್ದಾರೆ.

ಚುನಾವಣಾಧಿಕಾರಿಗೆ ಅವರು ಸಲ್ಲಿಸಿರುವ ಅಫಿಡವಿತ್ ನಲ್ಲಿ ಈ ವಿಷಯವಿದೆ.

ಅದೇ ರೀತಿ ತೇಜಿಂದರ್ ಅವರು ಇಂದಿರಾ ಗಾಂಧಿ ಮುಕ್ತ ವಿವಿಯಲ್ಲಿ ಪದವಿ ಕೋರ್ಸ್ ವೊಂದನ್ನು ಮಾಡುತ್ತಿದ್ದಾರೆ. ಇದು 12ನೇ ತರಗತಿ ಪಾಸಾಗದೆ ಪದವಿ ಮಾಡಬಯಸುವವರಿಗಾಗಿ ಇರುವ ಕೋರ್ಸ್.

ಬಿಜೆಪಿಯ ದಿಲ್ಲಿ ವಕ್ತಾರರಾಗಿರುವ ತೇಜಿಂದರ್ ಸಾಮಾಜಿಕ ಜಾಲತಾಣದಲ್ಲಿ ಅರ್ಧ ಸತ್ಯ, ಸುಳ್ಳು ಹಾಗು ಪ್ರಚೋದನಕಾರಿ ಸಂದೇಶ ಹರಡುವುದಕ್ಕೆ ಕುಖ್ಯಾತರಾಗಿ ‘ಟ್ರೋಲ್’ ಹಣೆಪಟ್ಟಿ ಪಡೆದವರು.

2011ರಲ್ಲಿ ಸುಪ್ರೀಂ ಕೋರ್ಟ್ ನ ತನ್ನ ಕೊಠಡಿಯಲ್ಲಿ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ಮೇಲೆ ಹಲ್ಲೆ ಮಾಡಿ ಪ್ರಚಾರಕ್ಕೆ ಬಂದವರು ತೇಜಿಂದರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News