ಅವಲಕ್ಕಿ ತಿಂದ ಕಾರ್ಮಿಕರು ಬಾಂಗ್ಲಾದೇಶಿಗಳೆಂದ ಬಿಜೆಪಿ ನಾಯಕ ವಿಜಯವರ್ಗಿಯಾಗೆ ಟ್ವಿಟರಿಗರ ತರಾಟೆ

Update: 2020-01-24 09:54 GMT

ಹೊಸದಿಲ್ಲಿ: ತಮ್ಮ ನಿವಾಸದಲ್ಲಿ ಕೆಲಸ ಮಾಡುತ್ತಿರುವ ಕೆಲ ನಿರ್ಮಾಣ ಕಾರ್ಮಿಕರು ಕೇವಲ ಅವಲಕ್ಕಿ ತಿನ್ನುತ್ತಿರುವುದರಿಂದ ಅವರು ಬಾಂಗ್ಲಾದೇಶಿಗಳಾಗಿರುವ ಸಾಧ್ಯತೆಯಿದೆ ಎಂದು ಹೇಳುವ ಮೂಲಕ ಹಿರಿಯ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯಾ ವಿವಾದಕ್ಕೀಡಾಗಿದ್ದಾರೆ.

ಇಂದೋರ್ ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಪರ ಆಯೋಜಿಸಲಾಗಿದ್ದ ವಿಚಾರಸಂಕಿರಣದಲ್ಲಿ ಮೇಲಿನ ವಿಚಾರವನ್ನು ಎತ್ತಿದ ವಿಜಯವರ್ಗಿಯಾ ನೆಟ್ಟಿಗರಿಂದ ತೀವ್ರ ತರಾಟೆಗೆ ಗುರಿಯಾಗಿದ್ದಾರೆ.

“ಅವಲಕ್ಕಿ ಮಾತ್ರ ತಿನ್ನುತ್ತಿದ್ದ ಅವರು ಬಾಂಗ್ಲಾದೇಶಿಗಳಾಗಿರಬಹುದೆಂದು ಶಂಕಿಸಿದೆ. ನಾನು ಶಂಕೆ ವ್ಯಕ್ತಪಡಿಸಿದ ಎರಡು ದಿನಗಳ ನಂತರ ಅವರು ನಮ್ಮ ಮನೆಗೆ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದರು. ನಾನು ಯಾವುದೇ ಪೊಲೀಸ್ ದೂರು ದಾಖಲಿಸಿಲ್ಲ, ಆದರೆ ಜನರನ್ನು ಎಚ್ಚರಿಸಲು ಈ ಘಟನೆಯನ್ನು ಉಲ್ಲೇಖಿಸಿದ್ದೇನೆ,'' ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಅವರ ಹೇಳಿಕೆ ಬಂದಿದ್ದೇ ತಡ ಟ್ವಿಟ್ಟರಿಗರು ಅವರನ್ನು ಝಾಡಿಸಿದ್ದಾರೆ. ಆಹಾರಶೈಲಿಯ ಮೂಲಕ ಜನರನ್ನು ಹೇಗೆ ಗುರುತಿಸುತ್ತೀರಿ, ಅವಲಕ್ಕಿ ಅಗ್ಗದ ದರದಲ್ಲಿ ದೊರೆಯುವುದರಿಂದ ಹಲವು ದಿನಗೂಲಿ ಕಾರ್ಮಿಕರು ಅದನ್ನೇ ಸೇವಿಸುತ್ತಾರೆ ಎಂದು ಹಲವು ಟ್ವಿಟ್ಟರಿಗರು ಬಿಜೆಪಿ ನಾಯಕನಿಗೆ ನೆನಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News