ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2020-01-24 18:35 GMT

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

ನರೋತ್ತಮ ಶೆಕ್ಸರಿಯಾ ಸ್ಕಾಲರ್‌ಶಿಪ್ ಪ್ರೋಗ್ರಾಂ 2020

ವಿವರ: ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಲು ಆಸಕ್ತಿ ಇರುವ ಭಾರತೀಯ ವಿದ್ಯಾರ್ಥಿಗಳಿಗೆ ಮುಂಬೈಯ ನರೋತ್ತಮ ಶೆಕ್ಸರಿಯಾ ಪ್ರತಿಷ್ಠಾನ ನೀಡುವ ಸ್ಕಾಲರ್‌ಶಿಪ್ ಇದಾಗಿದೆ. ಉನ್ನತ ಶೈಕ್ಷಣಿಕ ದಾಖಲೆ ಹೊಂದಿರುವ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಶಿಕ್ಷಣ ಸಾಲ ನೀಡುವ ಉದ್ದೇಶದ ಸ್ಕಾಲರ್‌ಶಿಪ್.

ಅರ್ಹತೆ: ಮಾನ್ಯತೆ ಪಡೆದ ಭಾರತೀಯ ವಿವಿ ಅಥವಾ ಸಂಸ್ಥೆಗಳಿಂದ ಪದವಿ ಪಡೆದಿರುವ 30 ವರ್ಷಕ್ಕಿಂತ ಕೆಳಹರೆಯದ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ 2020ರಿಂದ ಅನ್ವಯವಾಗುವಂತೆ ಸ್ನಾತಕೋತ್ತರ ಅಧ್ಯಯನ ನಡೆಸಲು ಆಹ್ವಾನ ಪಡೆದಿರುವವರು ಅರ್ಹರು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಭಾರತ ಮತ್ತು ವಿದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಲು ಬಡ್ಡಿರಹಿತ ಶಿಕ್ಷಣ ಸಾಲ ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 12, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/NSS2

********************

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

ಟೀಚ್ ಫಾರ್ ಇಂಡಿಯಾ ಫೆಲೊಶಿಪ್ 2020

 ವಿವರ: ಸಮಾಜಸೇವಾ ಸಂಸ್ಥೆಯಾಗಿರುವ ಟೀಚ್ ಫಾರ್ ಇಂಡಿಯಾ ಈ ಸ್ಕಾಲರ್‌ಶಿಪ್ ಘೋಷಿಸಿದೆ. ಕಡಿಮೆ ಆದಾಯವಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಪೂರ್ಣಾವಧಿಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಲು ವಿವಿಯ ಅಥವಾ ಕಾರ್ಯಸ್ಥಳದ ಯುವ ವಿದ್ಯಾರ್ಥಿಗಳಿಗೆ ಅವಕಾಶ ಇದಾಗಿದೆ. ಯುವಜನತೆ ಭಾರತದ ಶಿಕ್ಷಣ ವ್ಯವಸ್ಥೆಯ ತಳಮಟ್ಟದ ವಾಸ್ತವತೆಯನ್ನು ಅರಿತುಕೊಂಡು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ದುರ್ಬಲ ವರ್ಗದ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ದೇಶದಲ್ಲಿ ಶೈಕ್ಷಣಿಕ ಸಮಾನತೆಯನ್ನು ರೂಪಿಸುವುದು ಈ ಸ್ಕಾಲರ್‌ಶಿಪ್‌ನ ಮುಖ್ಯ ಉದ್ದೇಶವಾಗಿದೆ.

ಅರ್ಹತೆ: ಪದವಿ ಪಡೆದು ಈಗ ಶಿಕ್ಷಣ ಮುಂದುವರಿಸಿರುವವರು ಅಥವಾ ಯುವ ಉದ್ಯೋಗಿಗಳು, ಅನುಭವಿ ವೃತ್ತಿಪರರು ಮತ್ತು ಉದ್ಯಮಿಗಳು ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 20,412 ರೂ. ಹಾಗೂ ಹೆಚ್ಚುವರಿ ಸೌಲಭ್ಯ ದೊರಕಲಿದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 1, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/TFI7

********************

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

ಇನ್‌ಲ್ಯಾಕ್ಸ್ ಸ್ಕಾಲರ್‌ಶಿಪ್ಸ್ 2020 

ವಿವರ: ಯುರೋಪ್, ಅಮೆರಿಕ ಮತ್ತು ಇಂಗ್ಲೆಂಡಿನ ಉನ್ನತ ದರ್ಜೆಯ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ಣಾವಧಿಯ ಸ್ನಾತಕೋತ್ತರ, ಎಂಫಿಲ್ ಅಥವಾ ಡಾಕ್ಟರೇಟ್ ಅಧ್ಯಯನ ನಡೆಸಲು ಯುವ ವಿದ್ಯಾರ್ಥಿಗಳಿಗೆ ಇನ್‌ಲ್ಯಾಕ್ಸ್ ಶಿವದಾಸಾನಿ ಪ್ರತಿಷ್ಠಾನ ನೀಡುವ ಸ್ಕಾಲರ್‌ಶಿಪ್. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಪೂರ್ಣ ಬೋಧನಾ ಶುಲ್ಕ, ತಕ್ಕ ಜೀವನ ಭತ್ತೆ, ಏಕಮುಖ ಪ್ರಯಾಣ ಭತ್ತೆ ಹಾಗೂ ಆರೋಗ್ಯ ಭತ್ತೆ ನೀಡಲಾಗುವುದು.

 ಅರ್ಹತೆ: ಮಾನ್ಯತೆ ಪಡೆದ ವಿವಿ/ಶಿಕ್ಷಣ ಸಂಸ್ಥೆಯಿಂದ ಪ್ರಥಮ ದರ್ಜೆ ಪದವಿ ಅಥವಾ ತತ್ಸಮಾನ ಅರ್ಹತೆ ಪಡೆದಿರುವ, 30 ವರ್ಷ ಮೀರಿರದ ಕಳೆದ 6 ತಿಂಗಳಿನಿಂದ ಭಾರತದಲ್ಲಿ ಅಧ್ಯಯನ ನಡೆಸುತ್ತಿರುವ ಭಾರತೀಯರು ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ 1,00,000 ಅಮೆರಿಕನ್ ಡಾಲರ್ ನೆರವು ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/INL1

************************

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

ಫೇಕಲ್ಟಿ ಆಫ್ ಇಂಜಿನಿಯರಿಂಗ್ ಮೆಮೊರಿಯಲ್ ಸ್ಕಾಲರ್‌ಶಿಪ್ 2020

  ವಿವರ: ಪ್ರಥಮ ವರ್ಷದ ಇಂಜಿನಿಯರಿಂಗ್ (ಕಂಪ್ಯೂಟರ್ ಇಂಜಿನಿಯರಿಂಗ್ ಹೊರತುಪಡಿಸಿ)ಗೆ ಇತ್ತೀಚೆಗೆ ದಾಖಲಾತಿ ಪಡೆದಿರುವ ಮಹಿಳಾ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್ ಪ್ರಯೋಜನ ಪಡೆಯಬಹುದು. ಇಂಜಿನಿಯರಿಂಗ್ ಬೋಧನಾ ವಿಭಾಗದಲ್ಲಿ ಹೊಸದಾಗಿ ದಾಖಲಾತಿ ಪಡೆದಿರುವ ಅತ್ಯುತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ 2,000 ಕೆನಡ ಡಾಲರ್ ಮೊತ್ತದ ಆರ್ಥಿಕ ನೆರವು ನೀಡುವ ಉದ್ದೇಶವಿದೆ.

ಅರ್ಹತೆ: ಕೆನಡಾದ ಒಟ್ಟಾವ ವಿವಿಯಲ್ಲಿ ಇಂಜಿನಿಯರಿಂಗ್ ಬೋಧನಾ ವಿಭಾಗದಲ್ಲಿ ಪೂರ್ಣಾವಧಿ ಕೋರ್ಸ್‌ನ ಪ್ರಥಮ ವರ್ಷಕ್ಕೆ ನೋಂದಣಿಯಾಗಿರುವ ಮಹಿಳಾ ವಿದ್ಯಾರ್ಥಿಗಳು ಅರ್ಹರು.

 ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ 2,000 ಮೊತ್ತದ ಕೆನಡ ಡಾಲರ್ ಆರ್ಥಿಕ ನೆರವು ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/FMM1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News