ಸಂವಿಧಾನ ಅಪಾಯದ ಅಂಚಿನಲ್ಲಿದೆ: ಡಾ.ಜಿ. ಪರಮೇಶ್ವರ

Update: 2020-01-26 13:48 GMT

ಕೊರಟಗೆರೆ: ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ತರುವ ಮೂಲಕ ಈ ದೇಶದ ಪ್ರಜೆಗಳ ಅಸ್ಥಿತ್ವಕ್ಕೆ ದಕ್ಕೆ ತರುವ ಕೆಲಸ ಮಾಡಿರುವ ಕೇಂದ್ರ ಸರಕಾರ ನಮ್ಮ ಸಂವಿಧಾನವನ್ನು ಅಪಾಯಕಾರಿ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ‌. ಪರಮೇಶ್ವರ ಹೇಳಿದರು.

ಇಂದು ಕೊರಟಗೆರೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ 71ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರತಿಯೊಬ್ಬ ಭಾರತೀಯನಿಗೂ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಮಾನತೆ ಕೊಡುವ ಬಗ್ಗೆ ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಉಲ್ಲೇಖಿಸಿದ್ದಾರೆ. ಅವರವರ ಧರ್ಮ ಪಾಲನೆಗೆ ಅವಕಾಶವಿದೆ. ವಿವಿಧತೆಯಲ್ಲಿ ಏಕತೆ ಕಾಣುವ ಸಮಾಜವನ್ನು ಈ 71 ವರತಷದಲ್ಲಿ ನಮ್ಮ ಪಕ್ಷ ನಿರ್ಮಾಣ ಮಾಡಿತ್ತು. ಆದರೆ ಈಗ ಸಂವಿಧಾನ ಅಪಾಯದ ಅಂಚಿಗೆ ಬಂದಿದೆ.

ಕೇಂದ್ರ ಸರಕಾರ ಇತ್ತೀಚೆಗೆ ಸಿಎಎ ಹಾಗೂ ಎನ್‌‌ಆರ್‌ಸಿ ತರುವ ಮೂಲಕ ಈ ದೇಶದ ಪ್ರಜೆ ಎಂಬುದನ್ನು ಪ್ರತಿಯೊಬ್ಬರು ರುಜುವಾತು ಮಾಡುವ ಸ್ಥಿತಿ ನಿರ್ಮಾಣವಾಗಿದೆ.ಈ ಕಾಯಿದೆ ವಿರುದ್ಧ ಹೋರಾಟ ಮಾಡುತ್ತಿದ್ದರೂ  ಕೇಂದ್ರ ಸರಕಾರ ಕಿಮ್ಮಿತ್ತು ಬೆಲೆ ನೀಡುತ್ತಿಲ್ಲ. ಸರಕಾರ ಪೌರತ್ವ ತಿದ್ದಪಡಿ ಕಾಯಿದೆ ತರುವ ಮುನ್ನ ಮತ್ತೊಮ್ಮೆ ಯೋಚಿಸಬೇಕು. ಶಾಂತಿ ಕಾಪಾಡಬೇಕಿರುವ ಸರಕಾರ ಶಾಂತಿ ಕದಡುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಗಣರಾಜ್ಯೋತ್ಸವ ಸೇವಾ ಪ್ರಶಸ್ತಿಗೆ ಭಾಜನರಾದವರಿಗೆ ಸನ್ಮಾನಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News