ಭೀಮ್ ಆರ್ಮಿಯ ಅಝಾದ್ ರನ್ನು ದಿಲ್ಲಿಗೆ ಕಳುಹಿಸಿದ ಪೊಲೀಸರು

Update: 2020-01-27 04:46 GMT

ಹೈದರಾಬಾದ್‌  , ಜ.27: ಹೈದರಾಬಾದ್‌ನಲ್ಲಿ ರವಿವಾರ ಬಂಧಿಸಲ್ಪಟ್ಟ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಅವರನ್ನು ಸೋಮವಾರ ಬೆಳಗ್ಗೆ ಹೈದರಾಬಾದ್‌ ಪೊಲೀಸರು ದಿಲ್ಲಿ  ಕಳುಹಿಸಿದ್ದಾರೆ.

ಭೆಳಗ್ಗೆ 6:55ರ  ವಿಮಾನದಲ್ಲಿ ಆಝಾದ್ ಅವರನ್ನು ದಿಲ್ಲಿಗೆ  ಕಳುಹಿಸಲಾಯಿತು.

ಸಿಎಎ ವಿರೋಧಿ ಮತ್ತು ಎನ್‌ಆರ್‌ಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಚಂದ್ರಶೇಖರ್ ಆಝಾದ್ ಅವರನ್ನು ರವಿವಾರ ಹೈದರಾಬಾದ್‌ನಲ್ಲಿ ಬಂಧಿಸಲಾಯಿತು. ಪೌರತ್ವ ತಿದ್ದುಪಡಿ ಕಾಯ್ದೆ, ನಾಗರಿಕರ ರಾಷ್ಟ್ರೀಯ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಕುರಿತು ಸಭೆಯನ್ನುದ್ದೇಶಿ  ಮಾತನಾಡಲು ಅಝಾದ್  ಹೈದರಾಬಾದ್ ಗೆ ಆಗಮಿಸಿದ್ದರು

ಈ ಅವಮಾನವನ್ನು ದಲಿತರು ಎಂದಿಗೂ ಮರೆಯುವುದಿಲ್ಲ ಎಂದು ಭೀಮ್ ಆರ್ಮಿ ಮುಖ್ಯಸ್ಥ ಅಝಾದ್ ಸೋಮವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ. ತನ್ನನ್ನು ಬಲವಂತವಾಗಿ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು ಮತ್ತು ವಿಮಾನದಲ್ಲಿ ಹಿಂದಕ್ಕೆ  ಕಳುಹಿಸಲಾಯಿತು ಎಂದು ಹೇಳಿದರು.

ಅಝಾದ್  ಕಾರ್ಯಕ್ರಮ ಭಾಗವಹಿಸಲು  ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಜನರನ್ನು ಪ್ರಚೋದಿಸಿದ ಆರೋಪದ ಮೇಲೆ ಬಂಧನಕ್ಕೊಳಗಾದ ನಂತರ ದಿಲ್ಲಿ  ತಿಹಾರ್ ಜೈಲಿನಿಂದ ಬಿಡುಗಡೆಯಾದ ಕೆಲ ದಿನಗಳ ನಂತರ ಆಝಾದ್ ಬಂಧನಕ್ಕೊಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News