ಸಿಎಎ, ಎನ್.ಆರ್.ಸಿ. ವಿರುದ್ಧ ಕಲಬುರಗಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

Update: 2020-01-27 04:44 GMT

ಕಲಬುರಗಿ, ಜ.27: ಸಂವಿಧಾನದ ದಿನದ ಪ್ರಯುಕ್ತ ರವಿವಾರ ಮುಸ್ಸಂಜೆ ನಗರದ ರಿಂಗ್ ರೋಡ್ ರಸ್ತೆ ಮಧ್ಯೆ ಡಿವೈಡರ್ ನಲ್ಲಿ ನಿಂತು ನೂರಾರು ಮಂದಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಸಿಎಎ, ಎನ್.ಆರ್.ಸಿ. ಹಾಗೂ ಎನ್.ಪಿ.ಆರ್. ವಿರುದ್ಧ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರಮುಖ ಪ್ರದೇಶ ಖರ್ಗೆ ಪೆಟ್ರೋಲ್ ಬಂಗ್ ದಿಂದ ಆರಂಭವಾದ ಮಾನವ ಸರಪಳಿ ಟಿಪ್ಪು ಸುಲ್ತಾನ್ ಚೌಕ್, ರಫೀಕ್, ಚೌಕ್ ಮತ್ತು ಎಂ.ಎಸ್.ಕೆ.ಮಿಲ್. ಪ್ರದೇಶಗಳಲ್ಲಿ ಕಂಡುಬಂತು.

ಜಿಲ್ಲೆಯಲ್ಲಿ ನೂತನ ರೀತಿಯ ಪ್ರತಿಭಟನೆ ಇದ್ದಾಗಿದ್ದು, ಪ್ರತಿಭಟನೆಯಲ್ಲಿ ಯುವ ಸಮುದಾಯ ರಸ್ತೆಯಲ್ಲಿ ಕಂಡಿದರು. ಸರಕಾರ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಘೋಷಣೆಗಳು ಕೂಗಿ ತಮ್ಮ ವಿರೋಧ ವ್ಯಕ್ತಪಡಿಸಿದರು.

ಲೇಖಕಿ, ಹೋರಾಟಗಾರ್ತಿ ಕೆ. ನೀಲಾ, ಕೀಸಾನ್ ಸಭಾ ಮುಖಂಡ ಮೌಲಾ ಮುಲ್ಲಾ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News