ಗುಜರಾತ್ ಗಲಭೆ ಪ್ರಕರಣ : 14 ದೋಷಿಗಳಿಗೆ ಜಾಮೀನು, ಸಮಾಜ ಸೇವೆ ನಡೆಸಲು ಸುಪ್ರೀಂ ಸೂಚನೆ

Update: 2020-01-28 08:49 GMT

ಹೊಸದಿಲ್ಲಿ: ಗುಜರಾತ್‍ ನಲ್ಲಿ 2002ರಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ದೋಷಿಯೆಂದು ಘೋಷಿತರಾಗಿದ್ದ 14 ಮಂದಿಗೆ  ಷರತ್ತುಬದ್ಧ ಜಾಮೀನು ಲಭಿಸಿದೆ. ಷರತ್ತಿನಂತೆ ಅವರು ರಾಜ್ಯವನ್ನು ಪ್ರವೇಶಿಸುವ ಹಾಗಿಲ್ಲ. ಅಷ್ಟೇ ಅಲ್ಲದೆ  ಅವರು  ಸಮಾಜ ಸೇವೆ  ಹಾಗೂ ಆಧ್ಯಾತ್ಮಿಕ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇವರೆಲ್ಲರೂ ಸರ್ದಾರ್ಪುರದಲ್ಲಿ 33 ಮುಸ್ಲಿಮರನ್ನು ಜೀವಂತ ದಹಿಸಿದ ಪ್ರಕರಣದ ದೋಷಿಗಳಾಗಿದ್ದಾರೆ.

ಜಾಮೀನು ಪಡೆದ ನಂತರ ಈ ಅಪರಾಧಿಗಳು ಷರತ್ತನ್ನು ಪಾಲಿಸುತ್ತಿರುವ ಕುರಿತಂತೆ ಮಧ್ಯ ಪ್ರದೇಶದ ಇಂದೋರ್ ಹಾಗೂ ಜಬಲ್ಪುರದ  ಅಧಿಕಾರಿಗಳು  ನಿಗಾ ಇರಿಸಬೇಕೆಂದು  ಹಾಗೂ ಅವರಿಗೆ ಜೀವನೋಪಾಯಕ್ಕಾಗಿ ಕೆಲಸ  ದೊರಕಿಸಿಕೊಡುವಂತೆಯೂ ಆಡಳಿತಕ್ಕೆ ಸುಪ್ರೀಂ ಕೋರ್ಟ್ ತಿಳಿಸಿದೆ.

ಅವರ ನಡತೆಯ ಕುರಿತಂತೆ ಹಾಗೂ ಸುಪ್ರೀಂ ಕೋರ್ಟ್ ಸೂಚನೆ ಪಾಲಿಸಿದ ಕುರಿತಂತೆ ವರದಿ ಸಲ್ಲಿಸುವಂತೆಯೂ  ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಲಯ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News