ಸಂಪುಟ ವಿಸ್ತರಣೆ ನಂತರ ಬಿಜೆಪಿಯ ಬಿಕ್ಕಟ್ಟು ಬಯಲಿಗೆ: ಡಾ.ಜಿ.ಪರಮೇಶ್ವರ್

Update: 2020-01-29 12:03 GMT

ಬೆಂಗಳೂರು, ಜ.29: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಿಸಲಿ, ಆ ನಂತರ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಕಲಹಗಳು ಹಾಗೂ ಬಿಕ್ಕಟ್ಟು ರಾಜ್ಯದ ಜನತೆ ಗೊತ್ತಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿಯಲ್ಲಿ ಯಾರನ್ನೂ ನಿಭಾಯಿಸಲು ಸಾಧ್ಯವಾಗದ ಹಂತಕ್ಕೆ ತಲುಪಿದ್ದಾರೆ. ಸಂಪುಟ ವಿಸ್ತರಣೆ ನಂತರ ಬಿಜೆಪಿಯಿಂದ ಯಾರು ಸಿಡಿಯಲಿದ್ದಾರೆ. ಯಾರು ತಣ್ಣಗಾಗುತ್ತಾರೆ ಎಂಬುದೆಲ್ಲವೂ ಬಯಲಾಗಲಿದೆ ಎಂದು ತಿಳಿಸಿದರು.

ಕಳೆದ ಎರಡು ತಿಂಗಳಿನಿಂದ ಮುಖ್ಯಮಂತ್ರಿ ಯಡಿಯೂರಪ್ಪಗೆ ಸಂಪುಟ ವಿಸ್ತರಣೆ ಎನ್ನುವುದು ಕಬ್ಬಿಣದ ಕಡಲೆಯಂತಾಗಿದೆ. ಬಿಜೆಪಿ ಪಕ್ಷದಲ್ಲಿ ಈಗ ಯಾರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ. ಸಂಪುಟ ವಿಸ್ತರಣೆಯಾದರೆ ಬಿಜೆಪಿ ಒಳಗಿನ ಬಿಕ್ಕಟ್ಟು ಇಡೀ ರಾಜ್ಯದ ಜನರಿಗೆ ಗೊತ್ತಾಗಲಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಅವಧಿಯಲ್ಲಿ ಜಾರಿಯಾದ ನವ ಬೆಂಗಳೂರು ಯೋಜನೆಯನ್ನು ಪ್ರಸ್ತುತ ಬಿಜೆಪಿ ಸರಕಾರ ಹಿಂಪಡೆದಿರುವುದು ಸರಿಯಲ್ಲ. ಅವು ಜನಪರ ಕೆಲಸಗಳು. ಬೇರೆ ಪಕ್ಷ ಅಥವಾ ಸರಕಾರದ ಮೇಲೆ ಕೋಪ ಇರಬಹುದು. ಯೋಜನೆಗೂ ಬೇಕಾದರೆ ಬೇರೆ ಹೆಸರನ್ನು ಇಟ್ಟುಕೊಳ್ಳಲಿ. ಆದರೆ, ನಮ್ಮ ಮೇಲಿನ ಕೋಪವನ್ನು ಜನರ ಮೇಲೆ ತೋರಿಸುವುದು ಬೇಡ. ಕಾಂಗ್ರೆಸ್ ಅವಧಿಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸುವುದು ಬೇಡ.

-ಡಾ.ಜಿ.ಪರಮೇಶ್ವರ್, ಮಾಜಿ ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News