ಚೀನಾಕ್ಕೆ ಹೋಗುವ, ಬರುವ ವಿಮಾನಗಳನ್ನು ಸ್ಥಗಿತಗೊಳಿಸಿದ ಬ್ರಿಟಿಶ್ ಏರ್‌ವೇಸ್

Update: 2020-01-29 15:21 GMT

ಲಂಡನ್, ಜ. 29: ಮಾರಕ ಕೊರೋನವೈರಸ್ ಸೋಂಕಿನ ಹಿನ್ನೆಲೆಯಲ್ಲಿ, ಚೀನಾಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ತನ್ನ ಎಲ್ಲ ವಿಮಾನಗಳನ್ನು ಸ್ಥಗಿತಗೊಳಿಸಿರುವುದಾಗಿ ಬ್ರಿಟಿಶ್ ಏರ್‌ವೇಸ್ ಬುಧವಾರ ಪ್ರಕಟಿಸಿದೆ.

‘‘ಅಗತ್ಯ ಪ್ರಯಾಣಗಳನ್ನು ಹೊರತುಪಡಿಸಿ ಎಲ್ಲ ರೀತಿಯ ಪ್ರಯಾಣಗಳನ್ನು ರದ್ದುಗೊಳಿಸುವಂತೆ ಬ್ರಿಟನ್ ವಿದೇಶ ಕಚೇರಿ ಸೂಚಿಸಿದ ಬಳಿಕ, ತಕ್ಷಣದಿಂದ ಜಾರಿಗೆ ಬರುವಂತೆ ಚೀನಾ ಪ್ರಧಾನ ಭೂಭಾಗಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ಎಲ್ಲ ವಿಮಾನಗಳನ್ನು ನಾವು ಸ್ಥಗಿತಗೊಳಿಸಿದ್ದೇವೆ’’ ಎಂದು ಕಿರು ಹೇಳಿಕೆಯೊಂದರಲ್ಲಿ ಬ್ರಿಟಿಶ್ ಏರ್‌ವೇಸ್ ತಿಳಿಸಿದೆ.

‘‘ಅನಾನುಕೂಲತೆಗಾಗಿ ನಾವು ಗ್ರಾಹಕರ ಕ್ಷಮೆ ಕೋರುತ್ತೇವೆ, ಆದರೆ ನಮ್ಮ ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆ ಯಾವಾಗಲೂ ನಮ್ಮ ಆದ್ಯತೆಯಾಗಿದೆ’’ ಎಂದಿದೆ.

ಬ್ರಿಟಿಶ್ ಏರ್‌ವೇಸ್ ಪ್ರತಿ ದಿನ ಲಂಡನ್‌ನ ಹೀತ್ರೂ ವಿಮಾನ ನಿಲ್ದಾಣದಿಂದ ಶಾಂೈ ಮತ್ತು ಬೀಜಿಂಗ್‌ಗೆ ಹಾರಾಟ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News