ಪ್ರಜಾಪ್ರಭುತ್ವದ ಆದರ್ಶವಾದಕ್ಕಿರುವ ‘ಪೆನ್’ ಗೌರಿ ಲಂಕೇಶ್ ಪ್ರಶಸ್ತಿಗೆ ಯೂಸುಫ್ ಜಮೀಲ್ ಆಯ್ಕೆ

Update: 2020-01-29 16:40 GMT
ಫೋಟೊ ಕೃಪೆ: twitter.com/jameelyusuf

ಹೊಸದಿಲ್ಲಿ, ಜ. 29: ಜಮ್ಮು ಹಾಗೂ ಕಾಶ್ಮೀರದಲ್ಲಿ ನಿರ್ಭೀತ ಪತ್ರಿಕೋದ್ಯಮದ ಪ್ರವರ್ತಕ ಶ್ರೀನಗರ ಮೂಲದ ವರದಿಗಾರ ಯೂಸುಫ್ ಜಮೀಲ್ ಅವರನ್ನು ಪ್ರಜಾಪ್ರಭುತ್ವದ ಆದರ್ಶವಾದಕ್ಕಿರುವ 2019-2020ನೆ ಸಾಲಿನ ‘ಪೆನ್’ ಗೌರಿ ಲಂಕೇಶ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಿದ ಜ್ಯೂರಿಗಳಲ್ಲಿ ಚಂದನ್ ಗೌಡ, ವಿನುತಾ ಮಲ್ಯ ಹಾಗೂ ಆಶಿಯಾ ಝಹೂರ್ ಒಳಗೊಂಡಿದ್ದಾರೆ. ಲಂಕೇಶ್ ಅವರ ಆದರ್ಶವಾದ ಹಾಗೂ ಬದ್ಧತೆ ಪಾಲಿಸುವ ಮೂಲಕ ಪ್ರಜಾಪ್ರಭುತ್ವದ ಆದರ್ಶವಾದ ತೋರುವವರಿಗೆ ಪೆನ್ ದಕ್ಷಿಣ ಭಾರತ ಹಾಗೂ ಪೆನ್ ದಿಲ್ಲಿ ವಾರ್ಷಿಕ ಪೆನ್ ಗೌರಿ ಲಂಕೇಶ್ ಪ್ರಶಸ್ತಿಯನ್ನು ಸ್ಥಾಪಿಸಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಸಂಸ್ಕೃತಿ ಮುಂದುವರಿಸುವತ್ತ ಉತ್ಸಾಹ ಹಾಗೂ ಧೈರ್ಯದಿಂದ ಕಾರ್ಯ ನಿರ್ವಹಿಸುವ ವ್ಯಕ್ತಿ ಅಥವಾ ಸಂಘಟನೆಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಪ್ರತಿವರ್ಷ ಗೌರಿ ಲಂಕೇಶ್ ಅವರ ಜನ್ಮ ದಿನಾಚರಣೆಯಂದು ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿ ಫಲಕ ಹಾಗೂ 1 ಲಕ್ಷ ರೂಪಾಯಿ ನಗದು ಬಹುಮಾನ ಒಳಗೊಂಡಿದೆ. ಪ್ರಜಾಪ್ರಭುತ್ವ ವಾಸ್ತವವಾದಕ್ಕೆ ಇರುವ 2019-20ರ ಪೆನ್ ಗೌರಿ ಲಂಕೇಶ್ ಪ್ರಶಸ್ತಿಯನ್ನು ಯೂಸುಫ್ ಜಮೀಲ್ ಅವರಿಗೆ ಪ್ರಧಾನ ಮಾಡಲಾಗುತ್ತದೆ. ಪತ್ರಿಕೋದ್ಯಮದಲ್ಲಿ ಅನುಕರಣೀಯ ವೃತ್ತಿಪರ ಸಮಗ್ರತೆ ಹಾಗೂ ಪ್ರಜಾಪ್ರಭುತ್ವದ ಚಿಂತನೆಗಳನ್ನು ತೋರಿಸಿದ ಅವರ ಕಾರ್ಯಕ್ಕಾಗಿ ಈ ಪ್ರಶಸ್ತಿ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News