ತೆರಿಗೆ ಅಧಿಕಾರಿಗಳ ಬಳಿ ಬಡ್ಡಿ ವ್ಯವಹಾರದ ರಹಸ್ಯ ಬಿಚ್ಚಿಟ್ಟ ರಜಿನಿಕಾಂತ್..!

Update: 2020-01-30 11:03 GMT

ಚೆನ್ನೈ: ದಕ್ಷಿಣ ಭಾರತದ ಖ್ಯಾತ ಚಿತ್ರನಟ, ರಾಜಕಾರಣಿ ರಜಿನಿಕಾಂತ್ ಅವರು 2002-03ರ ಅವಧಿಯಲ್ಲಿ 2.63 ಕೋಟಿ ರೂಪಾಯಿ ಸಾಲ ನೀಡಿರುವುದಾಗಿ ತೆರಿಗೆ ಅಧಿಕಾರಿಗಳ ಬಳಿ ಹೇಳಿದ್ದಾರೆ.

ರಜಿನಿಕಾಂತ್ ಆದಾಯ ಮುಚ್ಚಿಟ್ಟಿದ್ದಾರೆ ಎಂಬ ಆರೋಪದ ಬಗ್ಗೆ ಕಾನೂನು ಕ್ರಮವನ್ನು ತೆರಿಗೆ ಇಲಾಖೆ ಜನವರಿ 28ರಂದು ಹಿಂದಕ್ಕೆ ಪಡೆದಿತ್ತು. 2000-03 ಮತ್ತು 2004-05ರಲ್ಲಿ ತಾನು ಹಣ ಸಾಲ ನೀಡುತ್ತಿದ್ದೆ ಎಂದು ಅವರು ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ.

ತೆರಿಗೆ ಅಂದಾಜಿಸುವಿಕೆ ಆದೇಶ "ದ ಹಿಂದೂ" ಪತ್ರಿಕೆಗೆ ಲಭ್ಯವಾಗಿದ್ದು, ಇದರ ಪ್ರಕಾರ ಚಿತ್ರನಟ 2002-03ರಲ್ಲಿ 2.63 ಕೋಟಿ ರೂಪಾಯಿ ಸಾಲ ನೀಡಿದ್ದು, 1.45 ಲಕ್ಷ ರೂಪಾಯಿ ಬಡ್ಡಿಯಿಂದ ಆದಾಯ ಗಳಿಸಿದ್ದಾರೆ. ಇದರಿಂದಾಗಿ 1.19 ಲಕ್ಷ ರೂಪಾಯಿಗಳ ನಿವ್ವಳ ಲಾಭ ಗಳಿಸಿದ್ದಾರೆ. ಈ ವಿವರಗಳನ್ನು ನೀಡಿದ ಬಳಿಕ ಹೀಗೆ ಗಳಿಸಿದ ಲಾಭಕ್ಕೆ ತೆರಿಗೆ ಪಾವತಿಸಿದ್ದಾರೆ.

ಶೇಕಡ 18ರ ಬಡ್ಡಿದರಲ್ಲಿ 1.95 ಕೋಟಿ ರೂಪಾಯಿಗಳನ್ನು ಕೆ.ಗೋಪಾಲಕೃಷ್ಣ ರೆಡ್ಡಿ ಎಂಬುವವರಿಗೆ ನೀಡಿದ್ದಾರೆ. ಅಂತೆಯೇ 60 ಲಕ್ಷ ರೂಪಾಯಿಗಳನ್ನು ಅರ್ಜುನ್‍ ಲಾಲ್ ಎಂಬುವವರಿಗೆ, 5 ಲಕ್ಷ ರೂಪಾಯಿಯನ್ನು ಶಶಿಭೂಷಣ್ ಅವರಿಗೆ ಹಾಗೂ 3 ಲಕ್ಷ ರೂಪಾಯಿಗಳನ್ನು ಸೋನು ಪ್ರತಾಬ್ ಎಂಬವರಿಗೆ ಸಾಲವಾಗಿ ನೀಡಿದ್ದಾರೆ. 2003-04ರಲ್ಲಿ 10 ಲಕ್ಷ ರೂಪಾಯಿಗಳನ್ನು ಮುರಳಿ ಪ್ರಸಾದ್ ಎಂಬುವವರಿಗೆ ಸಾಲ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News