ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2020-01-31 18:35 GMT

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

ವೈಸ್ ಚಾನ್ಸಲರ್ಸ್ ಗ್ಲೋಬಲ್ ಸ್ಕಾಲರ್‌ಶಿಪ್ ಪೋಸ್ಟ್‌ಗ್ರಾಜುವೇಟ್ 2020

 ವಿವರ: ಯಾವುದೇ ಗಾಯನ ಶೈಲಿಯಲ್ಲಿ ಪರಿಣತಿ ಹೊಂದಿರುವ, ಸಂಗೀತ ಸಂಸ್ಥೆಯಲ್ಲಿ ಎಎ ಅಥವಾ ಬಿಎಂ ವಿದ್ಯಾರ್ಥಿಗಳಾಗಿ ದಾಖಲಾತಿ ಪಡೆದಿರುವವರಿಗೆ ಕ್ಯಾಲಿಫೋರ್ನಿಯಾದ ಎಂಐ ಕಾಲೇಜ್ ಆಫ್ ಕಂಟೆಂಪರರಿ ಮ್ಯೂಸಿಕ್ ಸಂಸ್ಥೆ ನೀಡುವ ಸ್ಕಾಲರ್‌ಶಿಪ್. ಆಯ್ಕೆಯಾದವರಿಗೆ ಆರ್ಥಿಕ ನೆರವು ನೀಡಲಾಗುವುದು

ಅರ್ಹತೆ: ಅಸೋಸಿಯೇಟ್ ಆಫ್ ಆರ್ಟ್ಸ್ ಇನ್ ಪರ್ಫಾಮೆನ್ಸ್(ಗಾಯನ) ಕೋರ್ಸ್ ಅಥವಾ ಬ್ಯಾಚಲರ್ ಆಫ್ ಮ್ಯೂಸಿಕ್ ಇನ್ ಪರ್ಫಾ ಮೆನ್ ್ಸ(ಗಾಯನ) ಕೋರ್ಸ್‌ಗೆ ಅರ್ಜಿ ಹಾಕಿರುವ ಅಂತರ್‌ರಾಷ್ಟ್ರೀಯ ವಿದ್ಯಾರ್ಥಿಗಳು ಅರ್ಹರು. ಯಾವುದೇ ಎಂಐ ಕೋರ್ಸ್‌ಗೆ ಹೊಸದಾಗಿ ದಾಖಲಾತಿ ಪಡೆದವರು ಅಥವಾ ಪ್ರಸ್ತುತ ವಿದ್ಯಾರ್ಥಿಗಳಾಗಿರುವ/ಪದವಿ ಪೂರ್ಣಗೊಳಿಸದ ವಿದ್ಯಾರ್ಥಿಗಳು (ಎಂಐ ವಿಭಾಗದ ಸ್ವೀಕಾರ ಪತ್ರ ಹೊಂದಿರುವವರು) ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಕೋರ್ಸ್‌ನ ಪ್ರಥಮ ತ್ರೈಮಾಸಿಕ ಅವಧಿಗೆ 1000 ಅಮೆರಿಕನ್ ಡಾಲರ್ ಮೊತ್ತ ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಫೆಬ್ರವರಿ 28, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/PAV2

***************

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

ಬ್ರಿಟಿಷ್ ಕೌನ್ಸಿಲ್ ಐಇಎಲ್‌ಟಿಎಸ್ ಪ್ರೈಝ್ 2020

ವಿವರ: ಐಇಎಲ್‌ಟಿಎಸ್ ಪರೀಕ್ಷೆ ಎದುರಿಸುವ 10 ಅದೃಷ್ಟಶಾಲಿಗಳಿಗೆ ಬ್ರಿಟಿಷ್ ಕೌನ್ಸಿಲ್ ಘೋಷಿಸಿರುವ ಸ್ಕಾಲರ್‌ಶಿಪ್. 2020ರ ಶರದೃತು/ಚಳಿಗಾಲದ ಸೆಮಿಸ್ಟರ್ ಹಾಗೂ 2021ರ ಆರಂಭದ ಅವಧಿಯ ಬೋಧನಾ ಶುಲ್ಕವಾಗಿ 3,000 ಬ್ರಿಟನ್ ಪೌಂಡ್ ಪುರಸ್ಕಾರ ನೀಡಲಾಗುವುದು. ಭಾರತ, ನೈಜೀರಿಯಾ, ಯುಎಇ, ಉಜ್ಬೇಕಿಸ್ತಾನ, ಪಾಕಿಸ್ತಾನ ಮತ್ತು ಕೊಲಂಬಿಯಾ ದೇಶಗಳ ನಿವಾಸಿಗಳು ಅರ್ಜಿ ಸಲ್ಲಿಸಬಹುದು.

ಅರ್ಹತೆ: 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ, ಒಟ್ಟು 5 ಅಥವಾ ಹೆಚ್ಚಿನ ಐಇಎಲ್‌ಟಿಎಸ್ ಅಂಕ ಗಳಿಸಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ನೆರವು: ಐಇಎಲ್‌ಟಿಎಸ್ ಪರೀಕ್ಷೆ ಎದುರಿಸುವ 10 ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಪಾವತಿಸಲು 3,000 ಗ್ರೇಟ್‌ಬ್ರಿಟನ್ ಪೌಂಡ್ ಹಣ ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಫೆಬ್ರವರಿ 29, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/BIP2

*************

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

ರಾಯಲ್ ಥಾಯ್ ಗವರ್ನ್ ಮೆಂಟ್ ಲೂಮ್‌ನಾಮ್ ಖೊಂಗ್ ಪಿಜೈ(ಜಿಎಂಎಸ್ ಸ್ಕಾಲರ್‌ಶಿಪ್) 2020

ವಿವರ: ಥಾಯ್ಲೆಂಡ್‌ನ ಏಶಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ರಾಯಲ್ ಥಾಯ್ ಸರಕಾರದ ನೆರವಿನಿಂದ ಈ ಸ್ಕಾಲರ್‌ಶಿಪ್ ಘೋಷಿಸಿದ್ದು ಥಾಯ್ಲೆಂಡ್ ಹಾಗೂ ಇತರ ಏಶ್ಯನ್ ದೇಶಗಳ ಪದವೀಧರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 6 ಜಿಎಂಎಸ್ ದೇಶಗಳಲ್ಲಿ (ಕಾಂಬೋಡಿಯಾ, ಚೀನಾದ ದಕ್ಷಿಣ ಭಾಗದ ಯುನಾನ್ ಮತ್ತು ಗ್ವಾಂಗ್‌ಕ್ಸಿ ಪ್ರಾಂತಗಳು, ಲಾವೊಸ್, ಮ್ಯಾನ್ಮಾರ್, ವಿಯೆಟ್ನಾಮ್ ಮತ್ತು ಥಾಯ್ಲೆಂಡ್) ಮಾನವ ಸಂಪನ್ಮೂಲ ಅಭಿವೃದ್ಧಿಗೆ ನೆರವಾಗುವ ಉದ್ದೇಶದಿಂದ ಈ ಸ್ಕಾಲರ್‌ಶಿಪ್ ನೀಡಲಾಗುವುದು.

   ಅರ್ಹತೆ: ಅಂಗೀಕೃತ ಸಂಸ್ಥೆಯಲ್ಲಿ(ಸಂಬಂಧಿತ ಕ್ಷೇತ್ರದಲ್ಲಿ) 4 ವರ್ಷದ ಪದವಿ ಕೋರ್ಸ್‌ನಲ್ಲಿ ಅತ್ಯುತ್ತಮ ಶೈಕ್ಷಣಿಕ ದಾಖಲೆ ಹೊಂದಿರುವ ಏಶ್ಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಎಐಟಿಗೆ ಅಗತ್ಯವಿರುವಂತೆ ಇಂಗ್ಲಿಷ್‌ನಲ್ಲಿ ಉತ್ತಮ ಪ್ರಾವೀಣ್ಯತೆ ಹೊಂದಿರಬೇಕು. ವಿಶ್ವ ವಿವಿ ರ್ಯಾಂಕಿಂಗ್‌ನಲ್ಲಿ ಕ್ಯೂಎಸ್ 1,000ದಲ್ಲಿ ಲಿಸ್ಟ್ ಆಗಿರುವ ವಿವಿಗಳಿಂದ ಅಥವಾ ಕ್ಯೂಎಸ್ ಅಗ್ರ 350 ಏಶ್ಯನ್ ವಿವಿಗಳಿಂದ 3.0 ಅಥವಾ ಅದಕ್ಕಿಂತ ಹೆಚ್ಚಿನ ಸಾಧನೆಯೊಂದಿಗೆ ಸಿಜಿಪಿಎ ಪಡೆದಿರಬೇಕು. ಅಥವಾ ಇತರ ವಿವಿಗಳಿಂದ 3.5 ಅಥವಾ ಹೆಚ್ಚಿನ ಸಿಜಿಪಿಎ ಪಡೆದಿರಬೇಕು.

ನೆರವು: 22 ತಿಂಗಳ ಸ್ನಾತಕೋತ್ತರ ಪದವಿ ಕೋರ್ಸ್ ಗೆ ಬೋಧನಾ ಶುಲ್ಕ, ವಾಸ್ತವ್ಯ ವೆಚ್ಚ, ಎಐಟಿಯ ರೆಸಿಡೆನ್ಶಿಯಲ್ ಕ್ಯಾಂಪಸ್‌ನಲ್ಲಿ ಉಳಿದುಕೊಳ್ಳಲು ಜೀವನ ಭತ್ತೆ ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಫೆಬ್ರವರಿ 29, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/RLN1

**************

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

 ರಾಯಲ್ ಥಾಯ್ ಗವರ್ನ್‌ಮೆಂಟ್ ಎಚ್‌ಎಂ ಕ್ವೀನ್ಸ್ ಮಾಸ್ಟರ್ಸ್ ಸ್ಕಾಲರ್‌ಶಿಪ್ 2020

ವಿವರ: ಥಾಯ್ಲೆಂಡ್‌ನ ಏಶಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ರಾಯಲ್ ಥಾಯ್ ಸರಕಾರದ ನೆರವಿನಿಂದ ಈ ಸ್ಕಾಲರ್‌ಶಿಪ್ ಘೋಷಿಸಿದ್ದು ಏಶ್ಯನ್ ದೇಶಗಳ ಪದವೀಧರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಎಐಟಿಯ ಸ್ಕೂಲ್ ಆಫ್ ಎನ್‌ವಯರ್ನ್‌ಮೆಂಟ್, ರಿಸೋರ್ಸಸ್ ಆ್ಯಂಡ್ ಡೆವಲಪ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಈ ಸ್ಕಾಲರ್‌ಶಿಪ್ ನೀಡಲಾಗುವುದು.

  ಅರ್ಹತೆ: ಅಂಗೀಕೃತ ಸಂಸ್ಥೆಯಲ್ಲಿ(ಸಂಬಂಧಿತ ಕ್ಷೇತ್ರದಲ್ಲಿ) 4 ವರ್ಷದ ಪದವಿ ಕೋರ್ಸ್‌ನಲ್ಲಿ ಅತ್ಯುತ್ತಮ ಶೈಕ್ಷಣಿಕ ದಾಖಲೆ ಹೊಂದಿರುವ ಏಶ್ಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಎಐಟಿಗೆ ಅಗತ್ಯವಿರುವಂತೆ ಇಂಗ್ಲಿಷ್‌ನಲ್ಲಿ ಉತ್ತಮ ಪ್ರಾವೀಣ್ಯತೆ ಹೊಂದಿರಬೇಕು. ವಿಶ್ವ ವಿವಿ ರ್ಯಾಂಕಿಂಗ್‌ನಲ್ಲಿ ಕ್ಯೂಎಸ್ 1,000ದಲ್ಲಿ ಲಿಸ್ಟ್ ಆಗಿರುವ ವಿವಿಗಳಿಂದ ಅಥವಾ ಕ್ಯೂಎಸ್ ಅಗ್ರ 350 ಏಶ್ಯನ್ ವಿವಿಗಳಿಂದ 3.0 ಅಥವಾ ಅದಕ್ಕಿಂತ ಹೆಚ್ಚಿನ ಸಾಧನೆಯೊಂದಿಗೆ ಸಿಜಿಪಿಎ ಪಡೆದಿರಬೇಕು ಅಥವಾ ಇತರ ವಿವಿಗಳಿಂದ 3.5ಅಥವಾ ಹೆಚ್ಚಿನ ಸಿಜಿಪಿಎ ಪಡೆದಿರಬೇಕು.

 ನೆರವು: 22 ತಿಂಗಳ ಸ್ನಾತಕೋತ್ತರ ಪದವಿ ಕೋರ್ಸ್ ಗೆ ಬೋಧನಾ ಶುಲ್ಕ, ವಾಸ್ತವ್ಯ ವೆಚ್ಚ, ಎಐಟಿಯ ರೆಸಿಡೆನ್ಶಿಯಲ್ ಕ್ಯಾಂಪಸ್‌ನಲ್ಲಿ ಉಳಿದುಕೊಳ್ಳಲು ಜೀವನ ಭತ್ತೆ ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಫೆಬ್ರವರಿ 29, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/HQR2

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News