ಸಿಎಎಯಿಂದ ಜನರಿಗೆ ಸಮಸ್ಯೆಯಾದರೆ ಸರಕಾರದಿಂದ ಹೊರಬರುತ್ತೇನೆ: ಬಿಜೆಪಿ ಸಂಸದ ಉಮೇಶ್ ಜಾಧವ್

Update: 2020-02-02 15:21 GMT

ಕಲಬುರಗಿ, ಫೆ.2: ನಾನು ಎಲ್ಲಾ ಧರ್ಮದವರ, ಹಿರಿಯರ ಆಶೀರ್ವಾದದಿಂದ ಸಂಸದನಾಗಿ ಆಯ್ಕೆಯಾಗಿದ್ದೇನೆ. ಸಿಎಎಯಿಂದ ಗೊಂದಲ ಸೃಷ್ಟಿಸಲಾಗುತ್ತಿದೆ. ಈ ಕಾಯ್ದೆಯಿಂದ ಸಮಸ್ಯೆ ಆಗಲ್ಲ. ಒಂದು ವೇಳೆ ಜನರಿಗೆ ಸಮಸ್ಯೆಯಾದರೆ ನಾನು ಸರಕಾರದಿಂದ ಹೊರಬಂದು ಜನರ ಪರ ನಿಲ್ಲುತ್ತೇನೆ ಎಂದು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ.

ಇಂದು ನಗರದ ಶರಬಸವೇಸ್ವರ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ಹೈದರಾಬಾದ್ ಕರ್ನಾಟಕ ಚೆಂಬರ್ ಆಫ್ ಕಾಮರ್ಸ್ ಸಂಸ್ಥಾಪನ ದಿನದ ಅಂಗವಾಗಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರವಿಶಂಕರ ಗುರೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಶರಣಬಸಪ್ಪ ಅಪ್ಪಾ, ಖಾಜಾ ಬಂದೇನವಾಝ್ ದರ್ಗಾದ ಪೀಠಾಧಿಪತಿ ಡಾ.ಸೈಯದ್ ಶಾ ಖುಸ್ರೂ ಹುಸೈನಿ, ಶಾಸಕರಾದ ದಾತ್ರೇಯ ಪಾಟೀಲ ಸಿ.ರೇವೂರ್, ಬಸವರಾಜ್ ಮತ್ತಿಮೂಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News