ಜನಪ್ರಿಯ ಕಾದಂಬರಿಗಾರ್ತಿ ಮೇರಿ ಹಿಗ್ಗಿನ್ಸ್ ಕ್ಲಾರ್ಕ್ ನಿಧನ

Update: 2020-02-02 18:13 GMT

ವಾಶಿಂಗ್ಟನ್, ಫೆ. 2: ಅಮೆರಿಕದ ಜನಪ್ರಿಯ ಕಾದಂಬರಿಕಾರರ ಪೈಕಿ ಓರ್ವರಾಗಿರುವ ಕಾದಂಬರಿಗಾರ್ತಿ ಮೇರಿ ಹಿಗ್ಗಿನ್ಸ್ ಕ್ಲಾರ್ಕ್ ನಿಧನರಾಗಿದ್ದಾರೆ ಎಂದು ಅವರ ಪ್ರಕಾಶಕರು ಶುಕ್ರವಾರ ಪ್ರಕಟಿಸಿದ್ದಾರೆ. ಅವರಿಗೆ 92 ವರ್ಷ ಪ್ರಾಯವಾಗಿತ್ತು. ಅಭಿಮಾನಿಗಳು ಅವರನ್ನು ‘ಕ್ವೀನ್ ಆಫ್ ಸಸ್ಪೆನ್ಸ್ (ನಿಗೂಢತೆಯ ರಾಣಿ) ಎಂಬುದಾಗಿ ಬಣ್ಣಿಸುತ್ತಿದ್ದರು.

ಅವರು 90ರ ಹರಯದಲ್ಲೂ ವರ್ಷಕ್ಕೆ ಒಂದರಂತೆ ಪುಸ್ತಕವನ್ನು ಬರೆಯುತ್ತಿದ್ದರು. ಅವರ ಕಾದಂಬರಿಗಳು ಫ್ರಾನ್ಸ್‌ನಲ್ಲೂ ಗರಿಷ್ಠ ಪ್ರಮಾಣದಲ್ಲಿ ಮಾರಾಟವಾಗುತ್ತಿತ್ತು.

ಅಮೆರಿಕವೊಂದರಲ್ಲೇ ಅವರ 10 ಕೋಟಿಗೂ ಅಧಿಕ ಪುಸ್ತಕಗಳು ಮಾರಾಟಗೊಂಡಿವೆ. ವೈಯಕ್ತಿಕ ಜೀವನದಲ್ಲಿ ಹಲವಾರು ದುರಂತಗಳನ್ನು ಅನುಭವಿಸಿದ ಬಳಿಕ, ಅವರು ತನ್ನ 40ರ ಹರೆಯದಲ್ಲಿ ಕಾದಂಬರಿಗಾರ್ತಿಯಾಗಿ ಯಶಸ್ಸು ಸಂಪಾದಿಸಿದರು.

1975ರಲ್ಲಿ ಅವರು ಬರೆದ ಮೊದಲ ನಿಗೂಢ ಕಾದಂಬರಿ ‘ವೇರ್ ಆರ್ ದ ಚಿಲ್ಡ್ರನ್?’ ಈಗ 75ನೇ ಮುದ್ರಣಕ್ಕೆ ತಯಾರಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News