ಮಹಾತ್ಮ ಗಾಂಧಿ ನಮಗೆ ಜೀವಸೆಲೆ: ಪ್ರಧಾನಿ ಮೋದಿ

Update: 2020-02-06 08:56 GMT

ಹೊಸದಿಲ್ಲಿ, ಫೆ.6: ರಾಷ್ಟ್ರಪಿತ ಮಹಾತ್ಮ ಗಾಂಧಿ ನಿಮಗೆ   ಟ್ರೇಲರ್  ಆಗಿರಬಹುದು, ಆದರೆ ನಮಗೆ  ಜೀವಸೆಲೆಯಾಗಿದ್ದಾರೆ  ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ  ಇಂದು ಲೋಕಸಭೆಯಲ್ಲಿ ವಿಪಕ್ಷ ಕಾಂಗ್ರೆಸ್ ಗೆ ಕುಟುಕಿದ್ದಾರೆ

 ರಾಷ್ಟ್ರಪತಿಗಳ ಭಾಷಣಕ್ಕೆ  ಧನ್ಯವಾದ ಸಲ್ಲಿಸಿ ಮಾತನಾಡಿದ  ಅವರು ರೈತರ ಅಭಿವೃದ್ಧಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ರೈತರಿಗಾಗಿ 99 ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ದೇಶದ ಜನರು ನಮ್ಮ ಆಡಳಿತವನ್ನು 5 ವರ್ಷಗಳ ಕಾಲ ನೋಡಿದರು. ಮತ್ತೆ ಅಧಿಕಾರ ನೀಡಿದ್ದಾರೆ.

ಸದನದಲ್ಲಿ ಆರ್ಥಿಕ ಪರಿಸ್ಥಿಯ ಬಗ್ಗೆ ಚರ್ಚೆಯಾಗಬೇಕು. ವಿತ್ತೀಯ ಕೊರತೆಯ ಹೆಚ್ಚಳಕ್ಕೆ ಸರಕಾರ ಅವಕಾಶ ನೀಡಿಲ್ಲ.  ನಾವು ವಿಶ್ವದ ಆರ್ಥಿಕ ಪರಿಸ್ಥಿತಿಯ ಲಾಭ ಪಡೆಯಬೇಕಾಗಿದೆ. ಅರ್ಥವ್ಯವಸ್ಥೆಯನ್ನು ಬಲಿಷ್ಠಗೊಳಿಸಲು ನಾವು ಒತ್ತು ನೀಡಿದ್ದೇವೆ.  ದೇಶದಲ್ಲಿ ಬೆಲೆ ಏರಿಕೆ ನಿಯಂತ್ರಣದಲ್ಲಿದೆ ಎಂದರು.

ವಿಪಕ್ಷಗಳನ್ನು ನಾವು ಮಾರ್ಗದರ್ಶಕರೆಂದು ಭಾವಿಸಿತ್ತೇವೆ. ಅವರ  ನಿರುದ್ಯೋಗ ಸಮಸ್ಯೆ ಮಾತ್ರ ಪರಿಹರಿಸಲ್ಲ ಎಂದು ಹೇಳಿದರು.

"6 ತಿಂಗಳಲ್ಲಿ ಯುವಕರು ಮೋದಿಯನ್ನು ದೊಣ್ಣೆಯಿಂದ  ಹೊಡೆಯುತ್ತಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ನಿನ್ನೆ ಹೇಳಿದ್ದನ್ನು ನಾನು ಕೇಳಿದ್ದೇನೆ. ನನ್ನ 'ಸೂರ್ಯ ನಮಸ್ಕಾರ್' ಆವರ್ತನವನ್ನು ಹೆಚ್ಚಿಸಲು  ನಿರ್ಧರಿಸಿದ್ದೇನೆ ಹಾಗಾಗಿ ನನ್ನ ಬೆನ್ನು ತುಂಬಾ ಬಲಗೊಳ್ಳುತ್ತದೆ ಮತ್ತು ಅದು ಅನೇಕ  ದೊಣ್ಣೆಯ ಹೊಡೆತವನ್ನು ಸಹಿಸಿಕೊಳ್ಳಬಲ್ಲದು . "

ರಾಜಕೀಯ ಪ್ರೇರಿತವಾದ ಕೆಲವು ರಾಜ್ಯಗಳು ರೈತರಿಗೆ ಪಿಎಂ-ಕಿಸಾನ್ ಯೋಜನೆಯ ಲಾಭ ಪಡೆಯಲು ಅವಕಾಶ ನೀಡುತ್ತಿಲ್ಲ. ನಾನು ಅವರಿಗೆ ಮನವಿ ಮಾಡುತ್ತೇನೆ, ದಯವಿಟ್ಟು ರೈತ ಕಲ್ಯಾಣದಲ್ಲಿ ಯಾವುದೇ ರಾಜಕೀಯ ಇರಬಾರದು. ಭಾರತದ ರೈತರ ಏಳಿಗೆಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ  ಎಂದು ಹೇಳಿದರು.

ರಾಮ್ ಜನ್ಮಭೂಮಿ ಸಮಸ್ಯೆಯನ್ನು ಉಲ್ಲೇಖಿಸಿ ಪಿಎಂ ಮೋದಿ, " ನಾವು ಸಹ ನೀವು ಕೆಲಸ ಮಾಡಿದ ರೀತಿಯಲ್ಲಿಯೇ ಕೆಲಸ ಮಾಡಿದ್ದರೆ ಇಂದಿಗೂ  ಆ ವಿವಾದ ಹಾಗೆಯೇ ಉಳಿಯುತ್ತಿತ್ತು . "

"ನೀವು (ಪ್ರತಿಪಕ್ಷಗಳು) ಮಾಡಿದ ರೀತಿಯಲ್ಲಿಯೇ ನಾವು ಕೆಲಸ ಮಾಡಿದ್ದರೆ, ಸ್ವಾತಂತ್ರ್ಯದ 70 ವರ್ಷಗಳ ನಂತರವೂ 370 ನೇ ವಿಧಿ ಹೋಗುತ್ತಿರಲಿಲ್ಲ, ಟ್ರಿಪಲ್ ತಲಾಖ್ ತಡೆ ಕಾನೂನು,  ಮತ್ತು ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರಿಗೆ  ಮರಣದಂಡನೆ ಕಾನೂನು ಜಾರಿಗೆ ತರಲು ಎಂದಿಗೂ ಸಾಧ್ಯವಿರಲಿಲ್ಲ  ಎಂದು ಪ್ರಧಾನಿ ಮೋದಿ ಹೇಳಿದರು.

ಕಾಂಗ್ರೆಸ್ ನವರಿಗೆ ಮುಸ್ಲಿಮರು ಕೇವಲ ಮುಸ್ಲಿಮರು. ಆದರೆ ನಮಗೆ ಅವರು ಭಾರತೀಯರು ಎಂದು ಹೇಳಿದರು.

"ಪಂಡಿತ್ ನೆಹರೂ ಅವರೇ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸುವ ಪರವಾಗಿದ್ದರು, ನಾನು ಕಾಂಗ್ರೆಸ್ ಅನ್ನು ಕೇಳಲು ಬಯಸುತ್ತೇನೆ, ಪಂಡಿತ್ ನೆಹರು ಕೋಮುವಾದಿಯೇ ? ಅವರಿಗೆ ಹಿಂದೂ ರಾಷ್ಟ್ರ  ನಿರ್ಮಿಸಲು ಬಯಸಿದ್ದರೇ ?" ಎಂದು ಪ್ರಶ್ನಿಸಿದರು.

"ಸಿಎಎಯಿಂದ  ಭಾರತದ ಅಲ್ಪಸಂಖ್ಯಾತರಿಗೆ ಯಾವುದೇ  ಸಮಸ್ಯೆ ಇಲ್ಲ " ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News