ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2020-02-07 18:33 GMT

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

 ಬ್ರೇಕ್‌ಥ್ರೂ ಜನರೇಷನ್ ಫೆಲೊಶಿಪ್ 2020

  ವಿವರ: ಇತ್ತೀಚೆಗೆ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರೈಸಿದ ವಿಶ್ವದೆಲ್ಲೆಡೆಯ ಅಭ್ಯರ್ಥಿಗಳಿಂದ ಕ್ಯಾಲಿಫೋರ್ನಿಯಾದ ದಿ ಬ್ರೇಕ್‌ಥ್ರೂ ಇನ್‌ಸ್ಟಿಟ್ಯೂಟ್ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದವರಿಗೆ ಆರ್ಥಿಕ ನೆರವು ಒದಗಿಸಲಾಗುವುದು. ಹೊಸ ತಲೆಮಾರಿನ ಲೇಖಕರು ಹಾಗೂ ಚಿಂತಕರ ಅಭಿವೃದ್ಧಿಗೆ ನೆರವು ನೀಡುವ ಉದ್ದೇಶವಿದೆ.

  ಅರ್ಹತೆ: ಪದವಿ ಕೋರ್ಸ್‌ನ ಅಂತಿಮ ವರ್ಷದ ವಿದ್ಯಾರ್ಥಿಗಳು, ಕಾಲೇಜು ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರು (ವಿಶ್ವದೆಲ್ಲೆಡೆಯ) ಅರ್ಹರು. ಶಕ್ತಿ(ಇಂಧನ), ನಗರಗಳು ಅಥವಾ ಆಹಾರ ಮತ್ತು ಕೃಷಿ - ಈ ಮೂರರಲ್ಲಿ ಒಂದರಲ್ಲಿ ಸಂಶೋಧನೆ ನಡೆಸಲು ಆಸಕ್ತಿ ಹೊಂದಿರಬೇಕು.

ನೆರವು: ಆಯ್ಕೆಯಾದ ಅಭ್ಯರ್ಥಿಗಳು 10 ತಿಂಗಳಾವಧಿಗೆ ವಾರಕ್ಕೆ 600 ಅಮೆರಿಕನ್ ಡಾಲರ್ ಆರ್ಥಿಕ ನೆರವು, ಜೊತೆಗೆ ಪ್ರಯಾಣ ಮತ್ತು ವಸತಿ ನೆರವು ಸ್ಟೈಪೆಂಡ್ ಪಡೆಯಲಿದ್ದಾರೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಫೆಬ್ರವರಿ 11, 2020

ಅರ್ಜಿ: ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/BGF2

**************

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

ಟ್ರೆಂಟ್ ವಿವಿ ಎಂಟ್ರೆನ್ಸ್ ಸ್ಕಾಲರ್‌ಶಿಪ್ 2020

ವಿವರ: ಕೆನಡಾದ ಟ್ರೆಂಟ್ ವಿವಿಯಲ್ಲಿ ಪದವಿ ಕೋರ್ಸ್‌ಗೆ ದಾಖಲಾತಿ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಟ್ರೆಂಟ್ ವಿವಿ ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿವಿಧ ಆರ್ಥಿಕ ಪುರಸ್ಕಾರ ನೀಡಲಾಗುವುದು.

 ಅರ್ಹತೆ: ಇಂಗ್ಲಿಷ್ ಪ್ರಾವೀಣ್ಯತೆಯ ಬಗ್ಗೆ ಪುರಾವೆ ಹೊಂದಿರುವ (ಅಥವಾ ಟ್ರೆಂಟ್ ಇಎಸ್‌ಎಲ್: ಇಂಗ್ಲಿಷ್ ಫಾರ್ ಯುನಿವರ್ಸಿಟಿ ಮೂಲಕ ಷರತ್ತುಬದ್ಧ ಪ್ರವೇಶ ಪಡೆದಿರುವವರು), ದೇಶದ ನಿರ್ದಿಷ್ಟ ಪ್ರವೇಶದ ಕನಿಷ್ಠ ದರ್ಜೆ ಮಾನದಂಡ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ಅಭ್ಯರ್ಥಿಗಳು 3,000 ಕೆನಡಾ ಡಾಲರ್ ಮೊತ್ತದವರೆಗೆ ಆರ್ಥಿಕ ನೆರವು ಪಡೆಯಲಿದ್ದಾರೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಫೆಬ್ರವರಿ 15, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/TUE1

*********

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

ಶಿಬೆಗಾನ್ ಇಂಟರ್‌ನ್ಯಾಷನಲ್ ಸ್ಕಾಲರ್‌ಶಿಪ್ ಫಾರ್ ವುಮೆನ್ 2020

ವಿವರ: ಅಮೆರಿಕದಲ್ಲಿ ಪೂರ್ಣಾವಧಿ ಕೋರ್ಸ್ ನ ಮೂಲಕ ಪದವಿ, ಪೋಸ್ಟ್ ಡಾಕ್ಟೋರಲ್ ಅಧ್ಯಯನ ನಡೆಸುವ ಮಹಿಳೆಯರಿಗೆ ಅಂತರ್‌ರಾಷ್ಟ್ರೀಯ ಸಂಘಟನೆ ಶಿಬೆಗಾನ್ ನೀಡುವ ಸ್ಕಾಲರ್‌ಶಿಪ್. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸಲಾಗುವುದು.

 ಅರ್ಹತೆ: ಅಮೆರಿಕದಲ್ಲಿ ಪೂರ್ಣಾವಧಿ ಪದವಿ ಅಥವಾ ಪೋಸ್ಟ್‌ಡಾಕ್ಟೋರಲ್ ಅಧ್ಯಯನ ನಡೆಸುವ ಭಾರತೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಶಿಕ್ಷಣದ ಮಟ್ಟಕ್ಕೆ ಅನುಗುಣವಾಗಿ 32,000 ಅಮೆರಿಕನ್ ಡಾಲರ್ ಮೊತ್ತದವರೆಗಿನ ಪದವಿ ಪ್ರಾಯೋಜಕತ್ವ ಪಡೆಯಲಿದ್ದಾರೆ. ಜೊತೆಗೆ, ಪುಸ್ತಕ ವೆಚ್ಚ, ಆರೋಗ್ಯ ವಿಮೆ, ಮಾಸಿಕ ಸ್ಟೈಪೆಂಡ್ ಕೂಡಾ ಪಡೆಯಲಿದ್ದಾರೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 20, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/SBW1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News