ನೂತನ ಸಚಿವರಿಗೆ ಖಾತೆ ಹಂಚಿಕೆ: ಜಲಸಂಪನ್ಮೂಲ ಪಡೆಯುವಲ್ಲಿ ಜಾರಕಿಹೊಳಿ ಯಶಸ್ವಿ

Update: 2020-02-10 13:36 GMT

ಬೆಂಗಳೂರು, ಫೆ.10: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿ ಸೋಮವಾರ ಆದೇಶ ಹೊರಡಿಸಲಾಗಿದೆ.

ನಿರೀಕ್ಷೆಯಂತೆ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಇಲಾಖೆಯನ್ನು ಹಾಗೂ ಬಿ.ಎ.ಬಸವರಾಜ ನಗರಾಭಿವೃದ್ಧಿ ಇಲಾಖೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನುಳಿದಂತೆ, ಆನಂದ್ ಸಿಂಗ್-ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಶ್ರೀಮಂತ್ ಪಾಟೀಲ್-ಜವಳಿ ಇಲಾಖೆ, ಕೆ.ಗೋಪಾಲಯ್ಯ-ಸಣ್ಣ ಕೈಗಾರಿಕೆ ಹಾಗೂ ಸಕ್ಕರೆ ಇಲಾಖೆ, ಎಸ್.ಟಿ.ಸೋಮಶೇಖರ್-ಸಹಕಾರ ಇಲಾಖೆ, ಬಿ.ಸಿ.ಪಾಟೀಲ್-ಅರಣ್ಯ ಇಲಾಖೆ, ಡಾ.ಕೆ.ಸುಧಾಕರ್-ವೈದ್ಯಕೀಯ ಶಿಕ್ಷಣ ಇಲಾಖೆ, ಕೆ.ಸಿ.ನಾರಾಯಣಗೌಡ- ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಶಿವರಾಮ್ ಹೆಬ್ಬಾರ್-ಕಾರ್ಮಿಕ ಇಲಾಖೆಯನ್ನು ಪಡೆದಿದ್ದಾರೆ.

ಹಾಲಿ ಸಚಿವರ ಖಾತೆಗಳು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ-ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಹಣಕಾಸು, ಬೆಂಗಳೂರು ಅಭಿವೃದ್ಧಿ, ಇಂಧನ, ಗುಪ್ತಚರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸೇರಿದಂತೆ ಹಂಚಿಕೆಯಾಗದ ಖಾತೆಗಳು.

ಗೋವಿಂದ ಕಾರಜೋಳ-ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ, ಡಾ.ಸಿ.ಎನ್.ಅಶ್ವತ್ಥ ನಾರಾಯಣ-ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ, ಲಕ್ಷ್ಮಣ ಸವದಿ-ಸಾರಿಗೆ ಇಲಾಖೆ, ಕೆ.ಎಸ್.ಈಶ್ವರಪ್ಪ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ.

ಆರ್.ಅಶೋಕ್-ಕಂದಾಯ ಇಲಾಖೆ, ಜಗದೀಶ್ ಶೆಟ್ಟರ್-ಬೃಹತ್ ಮತ್ತು ಮಧ್ಯಮ ಕೈಗಾರಿಕಾ, ಸಾರ್ವಜನಿಕ ಉದ್ದಿಮೆ ಇಲಾಖೆ, ಬಿ.ಶ್ರೀರಾಮುಲು- ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಎಸ್.ಸುರೇಶ್ ಕುಮಾರ್-ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ.

ವಿ.ಸೋಮಣ್ಣ-ವಸತಿ ಇಲಾಖೆ, ಸಿ.ಟಿ.ರವಿ-ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ, ಬಸವರಾಜ ಬೊಮ್ಮಾಯಿ-ಗೃಹ ಮತ್ತು ಕೃಷಿ ಇಲಾಖೆ, ಕೋಟಾ ಶ್ರೀನಿವಾಸ ಪೂಜಾರಿ-ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ.

ಜೆ.ಸಿ.ಮಾಧುಸ್ವಾಮಿ-ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಇಲಾಖೆ, ಸಿ.ಸಿ.ಪಾಟೀಲ್-ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪ್ರಭು ಚೌವ್ಹಾಣ್-ಪಶುಸಂಗೋಪನೆ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ, ಶಶಿಕಲಾ ಜೊಲ್ಲೆ-ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಎಚ್.ನಾಗೇಶ್-ಅಬಕಾರಿ ಇಲಾಖೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News