ಹನೂರು: ಶಿಕ್ಷಣ ಸಚಿವರ ಶಾಲಾ ವಾಸ್ತವ್ಯ

Update: 2020-02-10 17:45 GMT

ಹನೂರು: ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ರವರು ಹನೂರು ತಾಲ್ಲೂಕಿನ ಕಾಡಂಚಿನ ಗ್ರಾಮವಾದ ಪಚ್ಚೆ ದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ರಾತ್ರಿ ತಮ್ಮ ಮೂರನೆಯ ಶಾಲಾ ವಾಸ್ತವ್ಯ ಹೂಡಿದರು.

ಪಚ್ಚೆದೊಡ್ಡಿ ಗ್ರಾಮವು ಹನೂರು ಪಟ್ಟಣದಿಂದ ಸುಮಾರು 15 ಕಿ.ಮೀ ದೂರದಲ್ಲಿದ್ದು ಕಚ್ಚಾ ರಸ್ತೆಯ ಮೂಲಕ ಮಾತ್ರ ತಲುಪಬಹುದಾಗಿದೆ‌. ಇದು ಕಾಡಂಚಿನ ಗ್ರಾಮವಾಗಿದ್ದು, ಸುಮಾರು 60 ಮನೆಗಳಿವೆ. ಪಚ್ಚೆದೊಡ್ಡಿ, ಕಾಂಚಳ್ಳಿ, ಅಜ್ಜಿಪುರ ಹಾಗೂ ಇತರ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರೊಂದಿಗೆ ಆ ಭಾಗದ ಶೈಕ್ಷಣಿಕ ಹಾಗೂ ಇತರ ಸಮಸ್ಯೆಗಳ ಕುರಿತು ಸಂವಾದ ನಡೆಸಿದರು. 

ಸಭೆ ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಜೊತೆ ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು. ಅ ವೇಳೆ ಮಕ್ಕಳು ನಾವು ಹೆಚ್ಚಿನ ವಿದ್ಯಾಬ್ಯಾಸಕ್ಕೇ ಬೇರೆ ಗ್ರಾಮಗಳಿಗೆ ಹೋಗಬೇಕಾಗಿದ್ದು, ಕಾಲ್ನಡಿಗೆಯಲ್ಲಿ ಹೋಗುದಕ್ಕೆ ಸರಿಯಾದ ರೀತಿಯ ರಸ್ತೆಯಿಲ್ಲ. ಆದ್ದರಿಂದ ರಸ್ತೆ ನಿರ್ಮಿಸಿ ಕೂಡಿ ಎಂದು ಬೇಡಿಕೆ ಇಟ್ಟರು.

10 ದಿನಗಳಲ್ಲಿ ಪಚ್ಚೆದೂಡ್ಡಿ ಗ್ರಾಮದಿಂದ ವ್ಯಾನ್ ವವ್ಯಸ್ಥೆ ಮಾಡಲಾಗುವುದು ಎಂಧು ಸಚಿವರು ಮಕ್ಕಳಿಗೆ ಭರವಸೆ ನೀಡಿದರು.   

ಸಚಿವರ ಮುಂದೆ ಅರಣ್ಯಾ ಇಲಾಖೆಯ ಸಂಬಂಧ ಸಾರ್ವಜನಿಕರಿಂದ ಬಂದ ದೂರುಗಳನ್ನು ಸರಿಪಡಿಸಲಾಗುವುದು ಎಂದು ಹೇಳುವ ಅಧಿಕಾರಿಗಳು ಸಚಿವರು ಹೋದ ನಂತರ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ದೂರಿದರು.

ಬಳಿಕ ಶಾಸಕ ನರೇಂದ್ರ ಮಾತನಾಡಿ, ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಾಡಂಚಿನ ಗ್ರಾಮಗಳ ಸಮಸ್ಯೆಗಳ ಕುರಿತು ಸಚಿವರ ಬಳಿ ಮನದಟ್ಟು ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News