ಮನೆ ಕಳ್ಳತನ ಆರೋಪಿಗಳ ಬಂಧನ: 3.64 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

Update: 2020-02-11 18:41 GMT

ಸೋಮವಾರಪೇಟೆ, ಫೆ.11: ತಾಲೂಕಿನ ಬಿಳಿಗೇರಿ ಗ್ರಾಮದ ಕಾಫಿ ಬೆಳೆಗಾರರಾದ ಕರುಂಬಯ್ಯ ಹಾಗು ಪೊನ್ನಪ್ಪ ಎಂಬವರ ಮನೆಯಲ್ಲಿ ಕಳ್ಳತನ ನಡೆಸಿದ ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಳಿಗೇರಿ ಕಾಫಿ ತೋಟವೊಂದರಲ್ಲಿ ಕೂಲಿ ಕಾರ್ಮಿಕರಾಗಿದ್ದ ಸತೀಶ, ಶಿವಮೊಗ್ಗದ ಬೊಮ್ಮನಕಟ್ಟೆ ನಿವಾಸಿ ಎಸ್. ಕಿರಣ್ ಹಾಗು ಹರಿಗೆ ಗ್ರಾಮದ ತೊಪ್ಪಿನಗಟ್ಟ ನಿವಾಸಿ ಕೆ. ಚಂದ್ರಶೇಖರ್ ಬಂಧಿತ ಆರೋಪಿಗಳಾಗಿದ್ದಾರೆ.

ಕಳೆದ ನ.11ರಂದು ಒಂದೇ ದಿನದಲ್ಲಿ ಎರಡು ಮನೆಗಳ ಬೀಗ ಮುರಿದು ಕಳ್ಳತನ ಮಾಡಲಾಗಿತ್ತು. ಬಂಧಿತರಿಂದ 3,64,800 ರೂ. ಮೊತ್ತದ 96 ಗ್ರಾಂ ಚಿನ್ನಾಭರಣಗಳು, 5760 ರೂ. ಬೆಲೆಯ 128 ಗ್ರಾಂ ತೂಕದ ಬೆಳ್ಳಿ ಸಾಮಾಗ್ರಿಗಳು ಒಂದು ಮೊಬೈಲ್ ಹಾಗು ಕೃತ್ಯಕ್ಕೆ ಬಳಸಿದ್ದ ಬೈಕೊಂದನ್ನು ವಶಕ್ಕೆ ಪಡೆದಿದ್ದಾರೆ. 

ಕೊಡಗು ಜಿಲ್ಲಾ ಎಸ್.ಪಿ ಸುಮನ್ ಡಿ. ಪನ್ನೇಕರ್, ಡಿವೈಎಸ್‍ಪಿ ಎಚ್.ಎಂ. ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ, ಸಿಪಿಐ ನಂಜುಂಡೇಗೌಡ, ಪಿಎಸ್‍ಐ ಶಿವಶಂಕರ್ ಕಾರ್ಯಾಚರಣೆ ನಡೆಸಿದ್ದಾರೆ. ತಂಡದಲ್ಲಿ ಅಪರಾಧ ವಿಭಾಗದ ಪಿಎಸ್‍ಐ ವಿರೂಪಾಕ್ಷ, ಠಾಣಾ ಸಿಬ್ಬಂದಿಗಳಾದ ಮಧು, ಟಿ.ಎಸ್. ಸಜಿ, ಎಸ್. ಪ್ರವೀಣ್, ನವೀನ್‍ಕುಮಾರ್, ಜಗದೀಶ, ಮಂಜುನಾಥ್, ಚಾಲಕರಾದ ಕುಮಾರ್ ಹಾಗು ಕುಶಾಲನಗರ ಕ್ರೈಂ ವಿಭಾಗದ ಬಿ.ಎಸ್. ದಯಾನಂದ, ಎಸ್.ಎಸ್. ಸಂದೇಶ್, ಪ್ರಕಾಶ್, ಕೊಡಗು ಜಿಲ್ಲಾ ಸಿಡಿಆರ್ ಸೆಲ್‍ನ ಸಿಬ್ಬಂದಿಗಳಾದ ರಾಜೇಶ್, ಗಿರೀಶ್ ಭಾಗವಹಿಸಿದ್ದರು. 

ಪ್ರಕರಣವನ್ನು ಬೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಎಸ್‍ಪಿ ಅವರು ನಗದು ಬಹುಮಾನವನ್ನು ಘೋಷಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News