ಸೋಮವಾರಪೇಟೆಯ ಕೆ.ಪಿ.ಸಾಹುಲ್ ಹಮೀದ್ ಗೆ ಪಿ.ಹೆಚ್.ಡಿ ಪದವಿ

Update: 2020-02-13 18:35 GMT

ಮಡಿಕೇರಿ ಫೆ.13: ಸೋಮವಾರಪೇಟೆಯ ನಿವಾಸಿ ಕೆ.ಪಿ. ಸಾಹುಲ್ ಹಮೀದ್ 'ಫ್ಯಾಕಲ್ಟಿ ಆಫ್ ಸಿವಿಲ್ ಇಂಜಿನಿಯರಿಂಗ್ ಸೈನ್ಸಸ್' ವಿಷಯದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಸೋಮವಾರಪೇಟೆಯ ದಿ. ಕೆ.ಪಿ.ಅಬ್ದುಲ್ ರಹ್ಮಾನ್(ದಾಡಿ ಮೇಸ್ತ್ರಿ) ಮತ್ತು ಬಿ.ಫಾತಿಮಾ ದಂಪತಿಯ ಪುತ್ರರಾದ ಇವರು ಕೊಡಗು ಜಿಲ್ಲೆಯ ADLR ಆಗಿ ಇದೀಗ ವರ್ಗಾವಣೆಗೊಂಡ ಕೆ.ಪಿ.ಶಂಸುದ್ದೀನ್ ಅವರ ಸಹೋದರ.

ಸಾಹುಲ್ ಹಮೀದ್ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸೋಮವಾರಪೇಟೆಯ ಓ.ಎಲ್.ವಿ. ಕಾನ್ವೆಂಟ್, ಪ್ರೌಢಶಾಲೆಯನ್ನು ಸೆಂಟ್ ಜೋಸೆಫ್ ಪ್ರೌಢಶಾಲೆ ಸೋಮವಾರಪೇಟೆಯಲ್ಲಿ ಪೂರೈಸಿದ್ದಾರೆ. ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ 'ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್' ಮುಗಿಸಿ,. ಮೈಸೂರಿನ ಜೆ.ಸಿ.ಇ.ಕಾಲೇಜಿನಲ್ಲಿ ಪದವಿ ಪಡೆದರು. ಮುಂದೆ ಇದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ ಸಾಹುಲ್ 'ಎನ್ವಿರಾನ್ಮೆಂಟ್ ಇಂಜಿನಿಯರಿಂಗ್' ವಿಷಯದಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ.

ಕಳೆದ 3 ವರ್ಷದಿಂದ ಪ್ರೊ.ಸದಾಶಿವ ಮೂರ್ತಿ ಬಿ.ಎಂ. ಇವರು ಮಾರ್ಗ ದರ್ಶನದಲ್ಲಿ 'Fate and transport of select VOCS Through Different sub-soils and ground water' ವಿಷಯದಲ್ಲಿ ಸಂಶೋಧನೆ ನಡೆಸಿ ಸಲ್ಲಿಸಿದ ಈ ಥೀಸಿಸ್ ಗೆ ಡಾಕ್ಟರೇಟ್ ಪದವಿ ಲಭಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News