ದಿಲ್ಲಿಯಲ್ಲಿ ಬಿಜೆಪಿ 36 ಕ್ಷೇತ್ರಗಳಲ್ಲಿ ಸೋತ ಅಂತರ 2,000 ಕ್ಕೂ ಕಡಿಮೆಯೇ ?: ಇಲ್ಲಿದೆ ವಾಸ್ತವ

Update: 2020-02-14 12:40 GMT

ಹೊಸದಿಲ್ಲಿ : ಇತ್ತೀಚೆಗೆ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 36 ಕ್ಷೇತ್ರಗಳಲ್ಲಿ  2,000ಕ್ಕೂ ಕಡಿಮೆ ಮತಗಳ ಅಂತರದಿಂದ ಸೋತಿದೆ ಎಂದು ಫೆ. 12ರಂದು ಪಕ್ಷದ ಸಂಸದ ಸತ್ಯದೇವ್ ಪಚೌರಿ ಹೇಳಿದ್ದರು. ''ಈ ಸಂಖ್ಯೆಯನ್ನು ಬಿಜೆಪಿ ಗೆದ್ದ 8ಕ್ಕೆ ಸೇರಿಸಿದರೆ 44 ಸ್ಥಾನಗಳಾಗುತ್ತಿದ್ದವು. ಮತದಾನ ಪ್ರಮಾಣ ಶೇ 3 ಹೆಚ್ಚಾಗಿದ್ದರೆ ಇಡೀ ಚಿತ್ರಣ ಬದಲಾಗುತ್ತಿತ್ತು,'' ಎಂದು ಅವರು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಇದೀಗ ಡಿಲೀಟ್ ಮಾಡಲಾಗಿದೆ.

ಆದರೆ ಇಂತಹುದೇ ಅರ್ಥ ಬರುವ ರೀತಿಯ ಟ್ವೀಟ್ ಗಳನ್ನು ಟ್ವಿಟ್ಟರ್ ನಲ್ಲಿ ಹಲವರು ಶೇರ್ ಮಾಡಿದ್ದಾರೆ.

ವಾಸ್ತವವೇನು ?

ಈ ಕುರಿತಂತೆ ಅಂತರ್ಜಾಲದಲ್ಲಿ ಜಾಲಾಡಿದಾಗ  ಸುದರ್ಶನ್ ನ್ಯೂಸ್‍ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‍ನ ಒಂದು ಟ್ವೀಟ್ ಕೂಡ ಇದೇ ಮಾತನ್ನು ಹೇಳಿತ್ತು. ಆದರೆ ಈ  ವಾಹಿನಿ ನೀಡಿದ ಮಾಹಿತಿಯಂತೆ ಅಂತಿಮ ಫಲಿತಾಂಶ ಘೋಷಣೆಯಾಗುವ ಮುನ್ನ ಪಕ್ಷದ ಅಭ್ಯರ್ಥಿಗಳು ಅಷ್ಟೇ ಸಂಖ್ಯೆಯ ಮತಗಳಿಂದ  ಹಿನ್ನಡೆ ಅನುಭವಿಸಿತ್ತೆಂದು ಹೇಳಿತ್ತು.

ಆದರೆ  ಚುನಾವಣಾ ಆಯೋಗದ ಅಧಿಕೃತ ವೆಬ್‍ಸೈಟ್‍ನ  ಅಂಕಿಅಂಶಗಳನ್ನು ಪರಿಶೀಲಿಸಿದಾಗ ಕೇವಲ ಇಬ್ಬರು ಬಿಜೆಪಿ ಅಭ್ಯರ್ಥಿಗಳು 2,000ಕ್ಕೂ ಕಡಿಮೆ ಮತಗಳ ಅಂತರದಿಂದ ಸೋತಿದ್ದಾರೆ. ಬಿಜ್ವಸನ್ ಕ್ಷೇತ್ರದಿಂದ ಸತ್ ಪ್ರಕಾಶ್ ರಾಣಾ 756 ಮತಗಳ ಅಂತರದಿಂದ ಸೋತಿದ್ದರೆ ಆದರ್ಶ್‍ನಗರ್ ಕ್ಷೇತ್ರದಿಂದ ರಾಜ್ ಕುಮಾರ್ ಭಾಟಿಯಾ 1589 ಮತಗಳ ಅಂತರದಿಂದ ಸೋಲುಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News