1,400 ತಲುಪಿದ ಸಾವಿನ ಸಂಖ್ಯೆ: 64,000 ಮಂದಿಗೆ ಸೋಂಕು

Update: 2020-02-14 17:18 GMT

ಬೀಜಿಂಗ್ (ಚೀನಾ), ಫೆ. 14: ಇಡೀ ಜಗತ್ತನ್ನು ಭೀತಿಯ ಅಂಚಿಗೆ ತಳ್ಳಿದ ನೂತನ ಕೊರೋನವೈರಸ್ ಕಾಯಿಲೆಯ ಸಾವಿನ ಸಂಖ್ಯೆ ಶುಕ್ರವಾರ 1,400ನ್ನು ಸಮೀಪಿಸಿದೆ.

ಈವರೆಗೆ ಸುಮಾರು 64,000 ಮಂದಿಗೆ ಮಾರಕ ಸೋಂಕು ತಗಲಿದೆ. ಕಳೆದ ಎರಡು ದಿನಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ.

ಚೀನಾದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವಂತೆಯೇ, ಪಕ್ಕದ ವಿಯೆಟ್ನಾಮ್‌ನಲ್ಲಿ ಹಲವು ಸೋಂಕು ಪ್ರಕರಣಗಳು ವರದಿಯಾಗಿವೆ. ಹಾಗಾಗಿ, ವಿಯೆಟ್ನಾಮ್‌ನ ಹಲವು ಗ್ರಾಮಗಳಿಗೆ ಬೀಗಮುದ್ರೆ ಜಡಿಯಲಾಗಿದೆ.

ಚೀನಾವನ್ನು ಹೊರತುಪಡಿಸಿ, 20ಕ್ಕೂ ಅಧಿಕ ದೇಶಗಳಲ್ಲಿ ನೂರಾರು ಕೊರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News