ಶೀತಲ ಖಂಡ ಅಂಟಾರ್ಕ್ಟಿಕದಲ್ಲಿ 20 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ಉಷ್ಣತೆ ದಾಖಲು!

Update: 2020-02-14 17:34 GMT

ಅಸಾವೊ ಪೌಲೊ (ಬ್ರೆಝಿಲ್), ಫೆ. 14: ಅಂಟಾರ್ಕ್ಟಿಕದಲ್ಲಿ ದಾಖಲೆಯ 20.75 ಡಿಗ್ರಿ ಸೆಲ್ಸಿಯಸ್ ಉಷ್ಣತೆಯನ್ನು ದಾಖಲಾಗಿದೆ. ಇದು ಈ ಶೀತಲ ಖಂಡದ ಈವರೆಗಿನ ಗರಿಷ್ಠ 20 ಡಿಗ್ರಿ ಸೆಲ್ಸಿಯಸ್ ಉಷ್ಣತೆಯ ಗಡಿಯನ್ನು ಮೀರಿದೆ.

‘‘ಅಂಟಾರ್ಕ್ಟಿಕದಲ್ಲಿ ನಾವು ಇಷ್ಟು ಅಧಿಕ ಉಷ್ಣತೆಯನ್ನು ಯಾವತ್ತೂ ನೋಡಿಲ್ಲ’’ ಎಂದು ಬ್ರೆಝಿಲ್ ವಿಜ್ಞಾನಿ ಕಾರ್ಲೋಸ್ ಶೇಫರ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

 ಅಂಟಾರ್ಕ್ಟಿಕ ಖಂಡದ ಉತ್ತರದ ತುದಿಯ ಆಚೆಗಿನ ದ್ವೀಪವೊಂದರಲ್ಲಿರುವ ವೀಕ್ಷಣಾ ನಿಲಯವೊಂದರಲ್ಲಿ ಈ ಉಷ್ಣತೆಯನ್ನು ದಾಖಲಿಸಲಾಯಿತು.

ಶೀಲತ ಖಂಡವು 20 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಿನ ಉಷ್ಣತೆಯನ್ನು ದಾಖಲಿಸಿರುವುದು ಭೂ ಗ್ರಹವು ಬಿಸಿಯಾಗುತ್ತಿರುವ ಬಗ್ಗೆ ಜನರಲ್ಲಿ ಇರುವ ಭೀತಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News