2020-21ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ

Update: 2020-02-15 13:24 GMT

ಬೆಂಗಳೂರು, ಫೆ.15: 2020-21 ನೇ ಸಾಲಿನ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

2020ರ ಮೇ 29ರಂದು ಶಾಲೆ ಆರಂಭವಾಗಲಿದ್ದು, ಅ.2 ರವರೆಗೆ ಮೊದಲ ಅವಧಿ ಹಾಗೂ ಅ.26 ರಿಂದ 2021 ಎ.26 ರವರೆಗೆ ಎರಡನೇ ಅವಧಿ ಕಾರ್ಯ ನಿರ್ವಹಿಸುವ ದಿನಗಳಾಗಿವೆ. ಅ.3 ರಿಂದ ಅ.25 ರವರೆಗೆ ಮಧ್ಯಂತರ(ದಸರಾ) ರಜೆ, 2021 ರ ಎ.15 ರಿಂದ ಮೇ.29 ರವರೆಗೆ ಬೇಸಿಗೆ ರಜೆ ನೀಡಲಾಗಿದೆ. ಒಟ್ಟಾರೆ 244 ದಿನ ಕಾರ್ಯ ನಿರ್ವಹಿಸಲಿದೆ.

ನಾಲ್ಕು ವಿವೇಚನಾ ರಜೆ ನೀಡಲು ಅವಕಾಶವಿದೆ. ರಾಷ್ಟ್ರೀಯ ಹಬ್ಬಗಳನ್ನು ನಿಗದಿಯಾಗಿರುವ ದಿನಗಳಂದೇ ಆಚರಿಸಬೇಕು. ಕ್ರಿಸ್‌ಮಸ್ ರಜೆ ನೀಡುವವರು ಮಧ್ಯಂತರ ದಸರಾ ರಜೆ ಕಡಿತಗೊಳಿಸಿ ರಜೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News