2 ದಿನದಲ್ಲಿ 7 ಜೀವ ಉಳಿಸಿದ ಏಮ್ಸ್ : ಹೇಗೆ ಗೊತ್ತೇ?

Update: 2020-02-19 06:22 GMT

ಹೊಸದಿಲ್ಲಿ: ಮೆದುಳು ನಿಷ್ಕ್ರಿಯವಾದ ಇಬ್ಬರು ವ್ಯಕ್ತಿಗಳ ಕುಟುಂಬದಿಂದ ಅಂಗಾಂಗ ದಾನಕ್ಕೆ ಒಪ್ಪಿಗೆ ಪಡೆದು ಏಳು ಮಂದಿಯ ಜೀವರಕ್ಷಣೆ ಮಾಡಿದ ಅಪರೂಪದ ಘಟನೆಗೆ ಭಾರತದ ಅತ್ಯುನ್ನತ ವೈದ್ಯಕೀಯ ಶಿಕ್ಷಣ ಸಂಸ್ಥೆಯಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ಪಾತ್ರವಾಗಿದೆ.

ಕೇವಲ 48 ಗಂಟೆಗಳ ಅಂತರದಲ್ಲಿ ಎರಡು ಹೃದಯ, ನಾಲ್ಕು ಕಿಡ್ನಿ, ಎರಡು ಲಿವರ್ ಹಾಗೂ ನಾಲ್ಕು ಕಣ್ಣುಗಳನ್ನು ಉತ್ತರ ಪ್ರದೇಶದ ಕಾಶ್‌ಗಂಜ್‌ನ 26 ವರ್ಷದ ಯುವಕ ಮತ್ತು ದೆಹಲಿಯ 61 ವರ್ಷದ ವ್ಯಕ್ತಿಯಿಂದ ದಾನವಾಗಿ ಪಡೆದು ಯಶಸ್ವಿಯಾಗಿ ಕಸಿ ಮಾಡಲಾಗಿದೆ.

ಅನಿಲ್ ಮಿತ್ತಲ್ (61) ಅವರು ದೇಹ ದಾನ ಸಮಿತಿಯಲ್ಲಿ ಅಂಗಾಂಗದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದರು. ಇವರ ಕುಟುಂಬ ಈ ಹಿಂದೆಯೂ ಕಳೇಬರಹವನ್ನು ಸಂಶೋಧನಾ ಉದ್ದೇಶಕ್ಕಾಗಿ ಎಐಐಎಂಎಸ್‌ಗೆ ನೀಡಿತ್ತು. ಸೋಮವಾರ ಬೆಳಗ್ಗೆ ಮಿತ್ತಲ್ ಅವರ ಮೆದುಳು ನಿಷ್ಕ್ರಿಯವಾಗಿರುವುದನ್ನು ವೈದ್ಯರು ಘೋಷಿಸಿದ್ದರು. ಅಂತೆಯೇ ದೆಹಲಿಯ ಕೂಲಿಕಾರ್ಮಿಕ ಸಚಿನ್ (26) ಎರಡನೇ ಮಹಡಿಯಿಂದ ಬಿದ್ದಿದ್ದ. ಫೆ.13ರಂದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನ ಬಳಿಕ ಅವರ ಮೆದುಳು ನಿಷ್ಕ್ರಿಯವಾಗಿರುವುನ್ನು ದೃಢಪಡಿಸಲಾಗಿತ್ತು. ಬಳಿಕ ಅಂಗಾಂಗ ದಾನಕ್ಕೆ ಸಚಿನ್ ಕುಟುಂಬದ ಮನವೊಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News